ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳಿಗೆ ಟ್ಯಾಬ್‌ ಅನುಕೂಲ: ಶಾಸಕ ರಾಜಶೇಖರ ಪಾಟೀಲ

ಪದವಿ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ:
Last Updated 24 ಜೂನ್ 2021, 5:18 IST
ಅಕ್ಷರ ಗಾತ್ರ

ಹುಮನಾಬಾದ್: ‘ಗ್ರಾಮೀಣ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಇಲ್ಲದ ಕಾರಣ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ– ಕಾಲೇಜುಗಳಿಂದ ನಡೆಯುತ್ತಿ ರುವ ಆನ್‌ಲೈನ್ ತರಗತಿ ಗಳಿಂದ ವಂಚಿತರಾಗಿದ್ದರು’ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ 2ನೇ ಮಹಡಿಯ ಶ್ರೀ ವೀರಭದ್ರೇಶ್ವರ ಸಭಾಂಗಣ ಉದ್ಘಾಟನೆ ಹಾಗೂ 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ಪಿಸಿ ವಿತರಣೆ ಮಾಡಿ ಅವರು ಮಾತನಾಡಿದರು.

‘ಆರ್ಥಿಕ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಈ ಟ್ಯಾಬ್‌ ಪಿಸಿಗಳು ಅನುಕೂಲ ಆಗಲಿವೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಪ್ರಾಂಶುಪಾಲ ವೀರಣ್ಣ ತುಪ್ಪದ್ ಪ್ರಾಸ್ತಾವಿಕ ಮಾತನಾಡಿದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ.ಶಶಿಕಾಂತ ಹಾರಕೂಡ, ಬಾಬುರಾವ ಪರಮಶೆಟ್ಟಿ, ಸಚಿನ್ ಮಠಪತಿ ಹಾಗೂ ತಾಲ್ಲೂ ಪಂಚಾಯಿತಿ ಮಾಜಿ ಸದಸ್ಯ ಕಂಟೆಪ್ಪ ದಾನಾ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಪುರಸಭೆ ಸದಸ್ಯ ಅಫ್ಸರ್‌ಮಿಯ್ಯಾ, ಡಾ.ಪ್ರಹ್ಲಾದ್ ಚೆಂಗಟೆ, ಡಾ.ಸಂಜೀವ, ಪ್ರೊ.ದಿಲೀಪಕುಮಾರ, ಸಂಪತ್‌ಕುಮಾರಿ, ಡಾ.ಜೈಯಶ್ರೀ, ಡಾ.ಗೌತಮ, ಡಾ.ರವಿನಾಯಕ, ಪ್ರೊ.ವೀರೇಶ್, ಡಾ.ಮಲ್ಲಿಕಾರ್ಜುನ ಇದ್ದರು.

‘ತಂತ್ರಜ್ಞಾನದಿಂದ ಶಿಕ್ಷಣದ ಪ್ರಗತಿ’
ಚಿಟಗುಪ್ಪ:
‘ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆಯಿಂದ ಸಮಗ್ರ ಪ್ರಗತಿ ಸಾಧ್ಯ’ ಎಂದು ಶಾಸಕ ರಾಜಶೇಖರ್‌ ಪಾಟೀಲ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಜ್ಯ ಸರ್ಕಾರದ ಟ್ಯಾಬ್‌ ಪಿಸಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ನಂತರ ಆನ್‌ಲೈನ್ ಶಿಕ್ಷಣಕ್ಕೂ ಮಹತ್ವ ಹೆಚ್ಚಾಗಿದೆ. ಆದ್ದರಿಂದ ಎಲ್ಲರೂ ಡಿಜಿಟಲ್ ಜಗತ್ತನ್ನು ಅರಿಯಬೇಕಿದೆ’ ಎಂದರು.

ಪ್ರಾಚಾರ್ಯ ಸುರೇಂದರ್‌ ಸಿಂಗ್‌ ಮಾತನಾಡಿ, ‘ರಾಜ್ಯ ಸರ್ಕಾರ 2020-21ನೇ ಶೈಕ್ಷಣಿಕ ಸಾಲಿನ ಡಿಜಿಟಲ್‌ ಕಲಿಕೆ ಯೋಜನೆ ಜಾರಿಗೊಳಿಸಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ’ ಎಂದರು.

ಉಪನ್ಯಾಸಕರಾದ ದಶರಥ್‌ ನಯನೂರ್‌, ಡಾ.ವೀರಶೆಟ್ಟಿ ಮೈಲೂರಕರ್‌, ಡಾ.ಶಿವಕುಮಾರ ಬಿರಾದಾರ, ಶ್ರವಣಕುಮಾರಿ ಬಿರಾದಾರ, ಸಯಿದಾ ಬಾನು, ನಫಿಸಾ ಫಾತಿಮಾ, ಜೈಭಾರತ ಮಂಗೇಶಕರ್‌, ಡಾ.ಹಾಲಪ್ಪ ಪೃಥ್ವಿರಾಜ್‌, ಯೇಸುಮಿತ್ರ, ಡಾ.ಶೇಷರಾವ್‌ ರಮೇಶ್‌, ವಿಜಯಕುಮಾರ, ಪುರಸಭೆ ಸದಸ್ಯ ದಿಲೀಪಕುಮಾರ ಬಗ್ದಲಕರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್‌ ಕನಕ್‌, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದರ್‌ ರಾಜಪುರೋಹಿತ್‌ ಇದ್ದರು. ಶಾಂತಕುಮಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT