ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಕೈಗೊಳ್ಳಿ

Last Updated 28 ನವೆಂಬರ್ 2022, 12:52 IST
ಅಕ್ಷರ ಗಾತ್ರ

ಭಾಲ್ಕಿ: ರೈತರು ಆರ್ಥಿಕ ಅಭಿವೃದ್ಧಿಗೆ ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆ ಕೈಗೊಳ್ಳಬೇಕು ಎಂದು ರೈತ ಮಿತ್ರ ಹೈನುಗಾರಿಕೆ ಸಂಘದ ಅಧ್ಯಕ್ಷ ಗಣೇಶ ಮೋಟೆ ಹೇಳಿದರು.

ತಾಲ್ಲೂಕಿನ ಭಾತಂಬ್ರಾ ಗ್ರಾಮದ ಮೋಟೆ ಡೇರಿ ಫಾರ್ಮ್‍ನಲ್ಲಿ ರೈತ ಮಿತ್ರ ಹಾಲು ಉತ್ಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ನಿತ್ಯ ಆದಾಯ ತಂದುಕೊಡುತ್ತದೆ ಎಂದು ತಿಳಿಸಿದರು.

ರೈತರು ಆಧುನಿಕ ಪದ್ಧತಿ ಅನುಸರಿಸಿದ್ದಲ್ಲಿ ಹೈನುಗಾರಿಕೆಯಲ್ಲಿ ಯಶಸ್ಸು ಕಾಣಬಹುದು ಎಂದು ಸಂಘದ ಉಪಾಧ್ಯಕ್ಷರೂ ಆದ ಪ್ರಗತಿ ಪರ ರೈತ ವಿಜಯಕುಮಾರ ಮೂಲಗೆ ನಿಡೇಬಾನ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಂಟ್ರಿ ಡಿಲೈಟ್ ಪ್ರೈವೇಟ್ ಲಿಮಿಟೆಡ್ ಕ್ಷೇತ್ರ ಮೇಲ್ವಿಚಾರಕ ದೀಪಕ ಬಿರಾದಾರ ಅವರು ಆಧುನಿಕ ಹೈನುಗಾರಿಕೆ ಹಾಗೂ ನವ ನಿರ್ಮಾಣ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಸಂಜುಕುಮಾರ ಹೈನುಗಾರಿಕೆಗೆ ಇರುವ ನಬಾರ್ಡ್‍ನ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಂಟ್ರಿ ಡಿಲೈಟ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ಶಾಮ ಚೌಬೆ, ವಕೀಲ ಸಂತೋಷ ಖಂಡಾಳೆ, ಶಾಮ ಬಿರಾದಾರ ಇದ್ದರು. ಲಕ್ಷ್ಮಣ ಸೂರ್ಯವಂಶಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT