ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ

ಶ್ರೀ ಸಂಗಮೇಶ್ವರ ಚರಿತ್ರೆ ಮಹತ್ವ ಕಿರು ಪುಸ್ತಕ ಬಿಡುಗಡೆ ಸಮಾರಂಭ
Last Updated 17 ಫೆಬ್ರುವರಿ 2020, 5:57 IST
ಅಕ್ಷರ ಗಾತ್ರ

ಕಮಲನಗರ : ಕಿರು ಪುಸ್ತಕ ಬಿಡುಗಡೆ ಸಮಾರಂಭಗಳು ಸಂಭ್ರಮ ರೀತಿಯಲ್ಲಿ ನಡೆಯಬೇಕು. ಜಿಲ್ಲೆಯಲ್ಲಿ ತಿಂಗಳಿಗೆ ಒಂದಾದರೂ ಇಂತಹ ಸಾಹಿತ್ಯಿಕ, ದೀಪೋತ್ಸವ ಕಾರ್ಯಕ್ರಮ ಜರುಗಬೇಕು ಎಂದು ವಿಧಾನ್ ಪರಿಷತ್ ಸದಸ್ಯ ವಿಜಯಸಿಂಗ್ ಹೇಳಿದರು.

ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಲಕ್ಷ ದೀಪೋತ್ಸವ ಪ್ರಯುಕ್ತ ಸಾಹಿತಿ ಮಲ್ಲಿಕಾರ್ಜುನ ದುಬುಳಗುಂಡೆ ಸ್ವಾಮಿ ರಚಿಸಿದ ಶ್ರೀ ಸಂಗಮೇಶ್ವರ ಚರಿತ್ರೆ ಕಿರು ಪುಸ್ತಕ ಬಿಡುಗಡೆ ಗೊಳಿಸಿದ ಮಾತನಾಡಿದರು.

ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮ, ದೇವಸ್ಥಾನ ಜೀಣೋದ್ಧಾರ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಂಎಲ್‍ಸಿ ಅನುದಾನದಲ್ಲಿ ಶ್ರೀ ಸಂಗಮೇಶ್ವರ ದೇವಾಲಯದ ಅಭಿವೃದ್ಧಿಗಾಗಿ ₹5 ಲಕ್ಷ ರೂ ಅನುದಾನ ನೀಡಲಾಗುವುದು. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಂಗಮೇಶ್ವರನ ಇತಿಹಾಸ ಪರಂಪರೆಯಾಗಿದೆ. ಇಂದಿಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜತೆ ಜ್ಞಾನ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವಂತೆ ಭಾಸವಾಗುತ್ತಿದೆ. ಸಂಗಮೇಶ್ವರನ ಕೃಪೆಯಿಂದ ಏಕಕಾಲದಲ್ಲಿ ಇವೆರಡೂ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಡೋಣಗಾಪುರ ದೇವಮ್ಮ ತಾಯಿ, ಸಂಗಮೇಶ್ವರ ದೇವಾಲಯದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ದುಬಲಗುಂಡೆ, ಡಾ.ರತಿಕಾಂತ ಮಜಗೆ, ಯುವ ಮುಖಂಡ ಶಶಿಕಾಂತ ಪಾಟೀಲ್, ಪಿಎಸ್‍ಐ ವಿ.ಬಿ.ಯಾದವಾಡ್, ಬಾಬುರಾವ ಪಾಟೀಲ, ರಾಜಕುಮಾರ ಪಾಟೀಲ, ಶಾಂತಪ್ಪ ಬಿರಾದಾರ, ಸಂಗಮೇಶ ಸರಬಾರೆ, ಅನೀಲಕುಮಾರ ಹೊಳಸಂಬ್ರೆ, ಶಾಲಿವಾನ ಪಾಟೀಲ, ಓಂಕಾರ ಬಿರಾದಾರ, ಅನೀಲಕುಮಾರ ಹೊಳಸಂಬ್ರೆ, ಸಂತೋಷ, ಶಾಲಿವಾನ ಪಾಟೀಲ, ಅಣ್ಣಾರಾವ ಪಾಟೀಲ, ಪರಮೇಶ ಮುಗಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT