ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕರ ಜವಾಬ್ದಾರಿ ದೊಡ್ಡದು’

Last Updated 24 ಸೆಪ್ಟೆಂಬರ್ 2022, 6:02 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಶಿಕ್ಷಕರು ಸ್ವಯಂ ವಿಮರ್ಶೆಗೆ ಒಳಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು’ ಎಂದು ಶರಣ ಸಾಹಿತ್ಯ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲಬುರಗಿಯ ರಂಗಸಂಗಮ ಕಲಾ ವೇದಿಕೆಯಿಂದ ಶುಕ್ರವಾರ ನಡೆದ ವಿಶ್ವೇಶ್ವರಯ್ಯ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕಲೆ, ಸಾಹಿತ್ಯ, ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಜೀವನದಲ್ಲಿ ಖುಷಿ, ನೆಮ್ಮದಿ ದೊರಕುತ್ತದೆ’ ಎಂದರು.

ಬಿಇಒ ಚನ್ನಬಸಪ್ಪ ಹಳ್ಳದ್ ಮಾತನಾಡಿ,‘ಗಡಿಭಾಗದ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಕನ್ನಡೇತರರಿಗೆ ಕನ್ನಡ ಕಲಿಸಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಲಿಂಗ ಮಠಪತಿ, ಪ್ರಾಚಾರ್ಯ ಸಿದ್ದಣ್ಣ ಮರ್ಪಳ್ಳೆ, ಸಂಜೀವಕುಮಾರ ನಡುಕರ್, ರಮೇಶ ಉಮಾಪುರೆ, ಸೂರ್ಯಕಾಂತ ಪಾಟೀಲ ಹಾಗೂ ಶಿವಪುತ್ರ ಸಂಗನಬಸವ ಮಾತನಾಡಿದರು.

ಪ್ರೊ.ರೇವಣಸಿದ್ದ ದೊರೆ, ಪ್ರೊ.ಮೀನಾಕ್ಷಿ ಬಿರಾದಾರ, ಎಂಜಿನಿಯರ್ ಬಸವರಾಜ ಗುಂಗೆ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕಿ ಅನಿತಾ ಸಾವಳಕರ, ಶಿವಕುಮಾರ ಜಡಗೆ, ಇಂದುಮತಿ ಅಬ್ದಾಗಿರೆ, ಆರತಿ ಫುಲೇಕರ, ದೇವಿದಾಸ ಜಾಧವ, ಜಯಾ ಕಿಣಗೆ, ಮಾಲಾಶ್ರೀ ಉಮಾಪುರೆ, ಶಿವಕನ್ಯಾ, ಧನಶ್ರೀ, ಗೀತಾರಾಣಿ, ಗುರುದೇವಿ, ಕಾಜಲ್ ಪ್ರವೀಣ ಹಾಗೂ ಉದ್ಧವರಾವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT