ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಾಳೆ

Last Updated 24 ಸೆಪ್ಟೆಂಬರ್ 2021, 14:04 IST
ಅಕ್ಷರ ಗಾತ್ರ

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಸೆಪ್ಟೆಂಬರ್ 26 ರಂದು ಇಲ್ಲಿಯ ಐ.ಎಂ.ಎ ಹಾಲ್‍ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಕಲಬುರ್ಗಿಯ ಕಂದಾಯ ಇಲಾಖೆಯ ವಲಯ ಆಯುಕ್ತೆ ಸಾವಿತ್ರಿ ಕೆ. ಬಿರಾದಾರ ಉದ್ಘಾಟಿಸುವರು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಸಾಕ್ಷರತಾ ಮಿಷನ್ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರೆ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಸುಧಿಂದ್ರ ಸಿಂದೋಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

28 ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿಬಿಎಸ್‍ಇ 10ನೇ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನಗೈದ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ತಿಳಿಸಿದ್ದಾರೆ.

* * *
ದಲಿತ ಸಂಘರ್ಷ ಸಮಿತಿಗೆ ಆಯ್ಕೆ

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ರಾಜಕುಮಾರ ಬನ್ನೇರ್ ತಿಳಿಸಿದ್ದಾರೆ.
ಬೀದರ್ ಕ್ಷೇತ್ರ: ನಾಗೇಂದ್ರ ಸಾಗರ (ಸಂಚಾಲಕ), ಅನಿಲ್ ಶಂಪೆ, ಸನ್ಮುಖ ಕಾಂಬಳೆ (ಸಂಘಟನಾ ಸಂಚಾಲಕರು), ಕಲ್ಲಪ್ಪ ವರ್ಮಾ (ಖಜಾಂಚಿ).
ಬೀದರ್ ದಕ್ಷಿಣ: ರಮೇಶ ಸಾಗರ (ಸಂಚಾಲಕ), ಗೌತಮ ಶಂಶೇರನಗರ, ರಮೇಶ ಸಾತೋಳೆ, ಲಕ್ಷ್ಮಣ ಶೇರಿಕಾರ, ಪ್ರವೀಣ ಕಮಠಾಣ, ರಾಜಕುಮಾರ ಕಾಂಬಳೆ, ಶಿವಕುಮಾರ ಸಂಗೋಳಗಿ (ಸಂಘಟನಾ ಸಂಚಾಲಕರು) ಮತ್ತು ರಾಜಕುಮಾರ ಗೈಬಾ (ಖಜಾಂಚಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT