ಚಿಟಗುಪ್ಪ: ‘ಸೆ.24ರಂದು ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,‘ತಾಲ್ಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.
ತಹಶೀಲ್ದಾರ್ ರವೀಂದ್ರ ದಾಮಾ ಮಾತನಾಡಿ,‘ಶಿಕ್ಷಕರ ದಿನ ಆಚರಣೆ ಸಮಿತಿಯ ಪದಾಧಿಕಾರಿಗಳು ಸಭೆಗೆ ಬರುವ ಗಣ್ಯರು ಹಾಗೂ ಶಿಕ್ಷಕರಿಗೆ ಸಮಸ್ಯೆ ಆಗದಂತೆ ಕಾಳಜಿ ವಹಿಸಿ ವ್ಯವಸ್ಥೆ ಮಾಡಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಶಾ, ಪ್ರಿತಮ್ ಸಿಂಗ್, ಮಾಧವ ಮೇತ್ರಿ, ಶಂಭುಲಿಂಗ ರೋಗನ್, ರಾಜಕುಮಾರ್ ಬೆಲೂರೆ, ಅಶೋಕ ಕುಮಾರ ಮಹೇಂದ್ರಕರ್, ರಾಜಪ್ಪ ಜಮಾದಾರ, ರಮೇಶ ಸಲಗರ, ಸುದರ್ಶನ ವಿಶ್ವಕರ್ಮ, ಮಹೇಶ, ಅಣ್ಣಿ ಸೊಲಪ್ಪ, ಬಸವರಾಜ ಮೇತ್ರಿ, ಗುಂಡಪ್ಪ ಕೊರೆ, ಸಂಜೀವನ್ ಬೊಸ್ಲೆ, ಪ್ರಭು ಪಂಚಾಳ್, ಪ್ರೆಮಿಳಾ ರಡ್ಡಿ, ಸಂಜುಕುಮಾರ ರಡ್ಡಿ, ಪಂಡಿತ್ ಕಲ್ಯಾಣಿ ಹಾಗೂ ಶ್ರಾವಣಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.