ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕಿಟ್ ವಿತರಿಸಿದ ಬಂಟಿ ಬಳಗ

Last Updated 16 ಮೇ 2021, 2:56 IST
ಅಕ್ಷರ ಗಾತ್ರ

ಔರಾದ್: ಬಂಟಿ ದರಬಾರೆ ಗೆಳೆಯರ ಬಳಗದ ವತಿಯಿಂದ ರಂಜಾನ್ ಹಾಗೂ ಬಸವ ಜಯಂತಿ ಅಂಗವಾಗಿ ಇಲ್ಲಿಯ 50 ಗುಡಿಸಲುವಾಸಿಗಳಿಗೆ ಶುಕ್ರವಾರ ಆಹಾರದ ಕಿಟ್ ವಿತರಿಸಲಾಯಿತು. ಆಹಾರದ ಕಿಟ್ ಅಕ್ಕಿ, ಗೋಧಿ ಹಿಟ್ಟು, ಸಿಹಿ ಎಣ್ಣೆ, ಸಕ್ಕರೆ, ಚಹಾಪುಡಿ ಒಳಗೊಂಡಿದೆ.

ಈ ವೇಳೆ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ, ‘ಲಾಕ್‍ಡೌನ್ ಘೋಷಣೆಯಿಂದ ಪಟ್ಟಣದಲ್ಲಿರುವ ಗುಡಿಸಲುವಾಸಿಗಳು ಕೆಲಸ ಕಳೆದುಕೊಂಡು ತೊಂದರೆ ಯಲ್ಲಿದ್ದಾರೆ. ಅವರಿಗೆ ನೆರವಾಗಲು ಆಹಾರದ ಕಿಟ್ ವಿತರಿಸಲಾಗಿದೆ. ಲಾಕ್‍ಡೌನ್ ಮುಗಿಯುವ ತನಕ ಈ ಎಲ್ಲ ಕುಟುಂಬಗಳಿಗೆ ವಾರಕೊಮ್ಮೆಯಾದರೂ ಕಿಟ್ ಕೊಡಲಾಗುವುದು’ ಎಂದರು.

ಸಾಮಾಜಿಕ ಕಾರ್ಯಕರ್ತ ರತ್ನದೀಪ ಕಸ್ತೂರೆ ಮಾತನಾಡಿ, ‘ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದು, ಅವರ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ರವಿ ದರಬಾರೆ, ಬಬಲು ಷಾ, ಕಿರಣ ದರ್ಬಾರೆ, ಸಿಮನ್ ಸಂತೋಷ ಉಜನಿ, ಕಾರ್ತಿಕ ರಾಜಪುತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT