ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಶರಣು ಸಲಗರ ಕುಟುಂಬದ ಆಸ್ತಿ ₹6.30 ಕೋಟಿ

ಶರಣು ವಿರುದ್ಧ ಹಲ್ಲೆ, ಜೀವ ಬೆದರಿಕೆ ಪ್ರಕರಣ
Last Updated 31 ಮಾರ್ಚ್ 2021, 12:47 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕುಟುಂಬ ಒಟ್ಟು ₹6.30 ಕೋಟಿ ಆಸ್ತಿ ಹೊಂದಿದೆ.

ಶರಣು ಸಲಗರ ಹೆಸರಲ್ಲಿ ಒಟ್ಟು ₹1.59 ಕೋಟಿ ಚರಾಸ್ತಿ, ₹1.05 ಕೋಟಿ ಸ್ಥಿರಾಸ್ತಿ, ಕೆಎಎಸ್‌ ಅಧಿಕಾರಿಯಾಗಿರುವ ಪತ್ನಿ ಸಾವಿತ್ರಿ ಹೆಸರಲ್ಲಿ ₹79.79 ಲಕ್ಷ ಚರಾಸ್ತಿ, ₹1.85 ಕೋಟಿ ಸ್ಥಿರಾಸ್ತಿ ಹಾಗೂ ಪುತ್ರ ಕ್ರಿಶ್ ಹೆಸರಲ್ಲಿ ₹1.11 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಶರಣು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ನೀಡಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ರಿಟರ್ನ್‌ನಲ್ಲಿ ₹10.71 ಲಕ್ಷ ವೈಯಕ್ತಿಕ ಆದಾಯ ಇರುವುದಾಗಿ ಉಲ್ಲೇಖಿಸಿದ್ದಾರೆ.

ಎಕ್ಸಿಸ್‌ ಬ್ಯಾಂಕ್ ಕಲಬುರ್ಗಿ ಸೂಪರ್‌ ಮಾರ್ಕೆಟ್ ಶಾಖೆಯಲ್ಲಿ ₹1.24 ಲಕ್ಷ, ಕಲಬುರ್ಗಿಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ₹2,429, ಕಲಬುರ್ಗಿ ಸೌಹಾರ್ದ ಪತ್ತಿನ ಸಹಕಾರ ನಿಯಮಿತದಲ್ಲಿ ₹32,850 ನಗದು ಹಾಗೂ ₹1 ಲಕ್ಷ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಶ್ರೀ ಗಜಾನನ ಇನ್‌ವೆಸ್ಟ್‌ಮೆಂಟ್‌ ಆ್ಯಂಡ್‌ ಕಾರ್ಪೋರೇಷನ್‌ನಲ್ಲಿ ₹5 ಲಕ್ಷ ಹೂಡಿಕೆ ಮಾಡಿದ್ದಾರೆ.

2019ರ ಮಾದರಿಯ ₹12.15 ಲಕ್ಷ ಮೌಲ್ಯದ ಇನ್ನೋವಾ ಕಾರು, ಒಂದು ಬೈಕ್‌, ₹16.10 ಲಕ್ಷ ಮೌಲ್ಯದ 35 ತೊಲ ಚಿನ್ನಾಭರಣ, ₹1.34 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಹೊಂದಿದ್ದಾರೆ. ಗುಲಬರ್ಗಾ ಕ್ಲಬ್‌ಗೆ ₹ 1.50 ಲಕ್ಷ ಪಾವತಿಸಿ ಅಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕಲಬುರ್ಗಿಯ ದದ್ದಾಪುರ ಬ್ಯಾಂಕ್‌ ಕಾಲೊನಿಯಲ್ಲಿ 3 ಸಾವಿರ ಚದರ್ ಅಡಿಯ ನಿವೇಶನ ಹೊಂದಿದ್ದಾರೆ.

ಶಿವಕುಮಾರ ಗುಂಡಪ್ಪ ಅವರಿಂದ ₹58 ಲಕ್ಷ ಹಾಗೂ ಸತೀಶ ಬಸವರಾಜ ಅವರಿಂದ ₹25 ಲಕ್ಷ ವೈಯಕ್ತಿಕ ಸಾಲ ಪಡೆದಿದ್ದಾರೆ. ಕಲಬುರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ₹47.60 ಲಕ್ಷ ಸಾಲ ಪಡೆದುಕೊಂಡಿದ್ದಾರೆ.

ಪತ್ನಿ ಸಾವಿತ್ರಿ ಆದಾಯ

ಪತ್ನಿ ಸಾವಿತ್ರಿ ವಾರ್ಷಿಕ ₹5.31 ಲಕ್ಷ ಆದಾಯ ಹೊಂದಿದ್ದಾರೆ. ಕಲಬುರ್ಗಿಯ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ₹1.27 ಲಕ್ಷ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ₹1,978, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಜಂಟಿ ಖಾತೆಯಲ್ಲಿ ₹2,429, ಎಚ್‌ಡಿಎಫ್‌ಸಿಯ ತ್ರಿಪುರಾಂತ ಶಾಖೆಯಲ್ಲಿ ₹1.47 ಲಕ್ಷ, ಮಗ ಕ್ರಿಶ್ ಹೆಸರಲ್ಲಿ ಬಸವಕಲ್ಯಾಣದ ಎಚ್‌ಡಿಎಫ್‌ಸಿ ಖಾತೆಯಲ್ಲಿ ₹1.11 ಲಕ್ಷ ಇಟ್ಟಿದ್ದಾರೆ.

₹60 ಲಕ್ಷ ಮೌಲ್ಯದ 1 ಕೆ.ಜಿ 308 ಗ್ರಾಂ ಚಿನ್ನಾಭರಣ, ₹4.02 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಸೇರಿ ಒಟ್ಟು ₹79.79 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕಲಬುರ್ಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಸಮೀಪದ ಬ್ಯಾಂಕ್‌ ಕಾಲೊನಿಯಲ್ಲಿ 2,400 ಚದರ್ ಅಡಿಯ ಮನೆ ಇದೆ. ಕಲಬುರ್ಗಿಯ ಎಕ್ಷಿಸ್‌ ಬ್ಯಾಂಕ್‌ ಶಾಖೆಯಿಂದ ₹17.47 ಲಕ್ಷ ಮನೆ ಸಾಲ ಪಡೆದುಕೊಂಡಿದ್ದಾರೆ.

ಶರಣು ವಿರುದ್ಧ ಎರಡು ಕ್ರಿಮಿನಲ್‌ ಪ್ರಕರಣ

ಶರಣು ಅವರ ವಿರುದ್ಧ ಕಲಬುರ್ಗಿ ಜಿಲ್ಲೆಯ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಐಪಿಎಸಿ 143, 147, 148, 323, 326, 504, 506, 114, 114, 149 ಅಡಿ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಕಲಬುರ್ಗಿ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಅಧಿಕಾರಿಗೆ ನಿಂದಿಸಿ ಬೊಟ್ಟು ಮಾಡಿ ತೋರಿಸಿದ್ದಕ್ಕೆ ಐಪಿಎಸಿ 504, 506, 147, 353, 114, 149 ಕಲಂ ಅಡಿಯಲ್ಲಿ ಆಳಂದ ತಾಲ್ಲೂಕಿನ ನರೋಣ ಠಾಣೆಯಲ್ಲಿ 2018ರಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ. ಆಳಂದ ಮೊದಲನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT