ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ: ಕೊಡೆಗಳ ಖರೀದಿ ಬಲು ಜೋರು

ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆ
Last Updated 26 ಜುಲೈ 2021, 3:37 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಕಳೆದೆರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯ ರಕ್ಷಣೆಗಾಗಿ ಜನರು ಕೊಡೆಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಹಿಂದೆ ಖರೀದಿಸಿ ಮನೆಯ ಮೂಲೆ ಸೇರಿದ್ದ ಕೊಡೆಗಳು ಕೂಡ ಹೊರಕ್ಕೆ ಬಂದಿವೆ. ಮನೆಯಿಂದ ಹೊರಬರುವ ಜನರ ಕೈಯಲ್ಲಿ ಸಾಮಾನ್ಯವಾಗಿ ಕೊಡೆಗಳು ಕಂಡುಬರುತ್ತಿವೆ.

‘ಭಾಲ್ಕಿ ಪಟ್ಟಣದ ಗಾಂಧಿ ವೃತ್ತದ ಸುತ್ತಮುತ್ತಲಿನ ಅಂಗಡಿಗಳಲ್ಲಿ ಹಾಗೂ ರಸ್ತೆಬದಿಯ ತಳ್ಳುವ ಗಾಡಿಗಳಲ್ಲಿ ಕೊಡೆಗಳು ಹಾಗೂ ರೇನ್‌ಕೋಟ್‌ಗಳು ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದವರು ಕೊಡೆ ಇಲ್ಲದೇ ಹೊಲ, ಗದ್ದೆಗಳಿಗೆ ನಡೆದುಕೊಂಡು ಹೋಗಲು ಆಗುವುದೇ ಇಲ್ಲ. ಹೀಗಾಗಿ ಕೊಡೆಗಳ ಮಾರಾಟ ಹೆಚ್ಚಿದೆ’ ಎಂದು ಹಿರಿಯರಾದ ಮಲ್ಲಿಕಾರ್ಜುನ ಮಾಕಾ ತಿಳಿಸುತ್ತಾರೆ.

‘ಅಂಗಡಿಗಳಲ್ಲಿ ವಿವಿಧ ಗಾತ್ರದ ಹಾಗೂ ಅನೇಕ ಬಣ್ಣಗಳಿಂದ ಕೂಡಿದ ಕೊಡೆಗಳು ಮಾರಾಟಕ್ಕಿವೆ. ಹೀಗಾಗಿ ಕೊಡೆಗಳ ಬೆಲೆಯು ಕನಿಷ್ಠ ₹150 ರಿಂದ ₹350 ವರೆಗೂ ಇದೆ. ಮಹಿಳೆಯರು ತಮ್ಮ ಬ್ಯಾಗಿನಲ್ಲಿ ಮಡಚಿಕೊಂಡು ಇಡುವ ಕೊಡೆಗಳು ಸಹ ಇವೆ’ ಎನ್ನುತ್ತಾರೆ ವ್ಯಾಪಾರಿ ರಮೇಶಕುಮಾರ ಹಾಗೂ ಸೂರಜ್.

‘ಈ ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗಲು ಕೊಡೆಗಳು ಅವಶ್ಯಕ. ಕಳೆದ ಎರಡ್ಮೂರುವರ್ಷಗಳ ಹಿಂದೆ ಖರೀದಿಸಿದ್ದ ಕೊಡೆಗಳು ಮಳೆ ಗಾಳಿ ಸಿಲುಕಿ ಹಾಳಾಗಿದೆ.ಹೀಗಾಗಿ ಹೊಸ ಕೊಡೆಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದಿದ್ದೇನೆ’ ಎನ್ನುತ್ತಾರೆ ಹಿರಿಯರಾದ ಧನರಾಜ ಮುತ್ತಂಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT