ಬಸವಕಲ್ಯಾಣ: ವಿವಿಧೆಡೆ ಕಳುವಾಗಿದ್ದ 17 ಬೈಕ್‌ಗಳನ್ನು ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು 7 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಇದಲ್ಲದೇ ₹30 ಸಾವಿರ ನಗದು, 250 ಕೆ.ಜಿ ವಿದ್ಯುತ್ ತಂತಿ ಸಹ ವಶಪಡಿಸಿಕೊಳ್ಳಲಾಗಿದೆ.
ಸಿಪಿಐ ಅಲಿಸಾಬ್, ಸಬ್ ಇನ್‌ಸ್ಪೆಕ್ಟರ್ ಅಂಬರೀಶ ವಾಗ್ಮೋಡೆ, ಸುರೇಶ ಹಜ್ಜರಗಿ ನೇತೃತ್ವದಲ್ಲಿ ಕಳ್ಳರನ್ನು ಬಂಧಿಸಲಾಗಿದೆ. ಸಿಬ್ಬಂದಿ ವಿಜಯಕುಮಾರ, ರಾಜಕುಮಾರ, ವಿನೋದ, ಗೌಸೊದ್ಧೀನ್, ಫ್ರಾನ್ಸಿಸ್, ಸಿಮನ್, ಪುಂಡಲೀಕ್, ಅಶೋಕ, ನಾಗರಾಜ, ಅಪ್ಪಾಸಾಬ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.