ಬಸವಕಲ್ಯಾಣ: ನಗರದಲ್ಲಿ ರಾತ್ರಿ ವೇಳೆ ಕಳ್ಳರು ಮಾರಕಾಸ್ತ್ರ ಹಿಡಿದು ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಗಂಗಾ ಕಾಲೊನಿ ಹಾಗೂ ತಾಜ್ ಕಾಲೊನಿಗಳಲ್ಲಿ ಆ13ರ ರಾತ್ರಿಯ ದೃಶ್ಯ ಇದು ಎಂದು ತಿಳಿದು ಬಂದಿದೆ.
ನಾಲ್ಕೈದು ಯುವಕರು ಕೈಯಲ್ಲಿ ಲಾಂಗ್, ಮಚ್ಚು ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಈ ಕಳ್ಳರು ಕೆಲ ಮನೆಗಳಿಗೂ ನುಗ್ಗಿರುವ ಬಗ್ಗೆ ತಿಳಿದುಬಂದಿದೆ. ಆದರೂ ಈ ಸಂಬಂಧ ಯಾರೂ ದೂರು ನೀಡಿಲ್ಲ. ಕಳ್ಳರ ಓಡಾಟದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.