ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಜೀವನಕ್ಕೆ ಬೇಕು ಧನಾತ್ಮಕ ಚಿಂತನೆ

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ
Last Updated 5 ಡಿಸೆಂಬರ್ 2019, 9:31 IST
ಅಕ್ಷರ ಗಾತ್ರ

ಬೀದರ್‌: ಮನಮ್ಮ ವಿಚಾರಗಳು ಧನಾತ್ಮಕವಾಗಿದ್ದರೆ ಮುಕ್ತ ಜೀವನ ನಡೆಸಬಹುದು. 12ನೇ ಶತಮಾನದ ಶರಣರು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ದಾಸೋಹಕ್ಕೆರಳು ಶಂಕರದೇವ, ತ್ಯಾಗ, ಬಲಿದಾನಕ್ಕೆ ಹರಳಯ್ಯ ಮಧುವಯ್ಯ, ಶಿವಯೋಗಕ್ಕೆ ಸಿದ್ಧರಾಮಯ್ಯ, ವೈರಾಗ್ಯಕ್ಕೆ ಅಕ್ಕಮಹಾದೇವಿ, ವ್ಯೋಮಕಾಯಕ್ಕೆ ಅಲ್ಲಮಪ್ರಭು, ಜ್ಞಾನಕ್ಕೆ ಚನ್ನಬಸವಣ್ಣ, ಭಕ್ತಿಗೆ ಬಸವಣ್ಣ. ಹೀಗೆ ಅಂದು ಭಕ್ತಿ ಸಾಮ್ರಾಜ್ಯವನ್ನೇ ಕಟ್ಟಿದ್ದರು.

ಬಸವಣ್ಣನ ಕಾಯಕವೇ ಕೈಲಾಸ ತತ್ವ ಆರ್ಥಿಕತೆಯ ಸುಧಾರಣೆ ಜತೆಗೆ ದೇಶದಲ್ಲಿ ವೈಚಾರಿಕತೆ ಹರಡಿಸಿದೆ.
ಬಸವಣ್ಣನವರ ಭಕ್ತಿಯಲ್ಲಿ ಮೋಸ, ವಂಚನೆ, ಅನ್ಯಾಯ, ಅತ್ಯಾಚಾರ, ಅಪನಂಬಿಕೆ, ಅಂಧಾನುಕರಣೆಗಳು ಇರಲಿಲ್ಲ. ಬಸವಣ್ಣ ಸರ್ವ ಶರಣರಲ್ಲಿ ಭಕ್ತಿ ಭೀಕ್ಷೆ ಬೇಡಿದಾಗ ಎನ್ನ ಪಾತ್ರೆ ತುಂಬಿತಯ್ಯ ಎಂದು ಹೇಳಿದರು. ಇದರಿಂದಲೇ ಅವರು ಭಕ್ತಿ ಭಂಡಾರಿ ಎನಿಸಿಕೊಂಡರು.

ವ್ಯೋಮಕಾಯ ಅಲ್ಲಮಪ್ರಭು ಸೊನ್ನಲಾಪುರದ ಸಿದ್ಧರಾಮರ ಹತ್ತಿರ ಹೋಗಿ ವೈಚಾರಿಕ ಸಂಘರ್ಷ ಮಾಡಿ, ಚಿಂತನ ಮಂಥನದ ಮೂಲಕ ಕಲ್ಯಾಣಕ್ಕೆ ಕರೆ ತಂದು ದೀಕ್ಷೆ ಕೊಟ್ಟು ಅವರನ್ನು ಶಿವಯೋಗಿ ಸಿದ್ಧರಾಮರನ್ನಾಗಿ ಪರಿವರ್ತನೆ ಮಾಡಿದರು.

ನಾದದಿಂದ ಬಿಂದು, ಬಿಂದುವಿನಿಂದ ಕಳೆ, ಅಕಾರ-ಉಕಾರ-ಮಕಾರದಿಂದ ಓಂಕಾರ ಹೊರಹೊಮ್ಮಿದೆ. ಓಂಕಾರ ಜಗತ್ತಿನ ಸೃಷ್ಟಿ ಮಂತ್ರ. ಲಿಂಗಾಯತ ಒಂದು ಮಾನವೀಯತೆಯ ಧರ್ಮ. ಮನುಷ್ಯತ್ವದ ಸಂಕೇತ. ದಲಿತ ಸಮುದಾಯಕ್ಕೆ ನ್ಯಾಯ, ನೀತಿ, ಧರ್ಮ ಒದಗಿಸಿ ಕೊಟ್ಟವರು ಬಸವಣ್ಣ. ಬಸವಣ್ಣ ಬಾಗಿದ ತಲೆ, ಮುಗಿದ ಕೈಯಿಂದಲೇ ಧರ್ಮ ಕಟ್ಟಿದರು.

(ಬೀದರ್‌ನ ಬಿವಿಬಿ ಕಾಲೇಜಿನಲ್ಲಿ ನಡೆದಿರುವ ‘ವಚನ ದರ್ಶನ’ ಪ್ರವಚನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT