ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊಗೆ ಬೆಲೆ ಕುಸಿತದ ಬರೆ!

Last Updated 14 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೀದರ್‌: ಈ ಬಾರಿ ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಜಿಲ್ಲೆಗಳಲ್ಲೂ ರೈತರು ಅಧಿಕ ಪ್ರಮಾಣದಲ್ಲಿ ಟೊಮೆಟೊ ಬೆಳೆದು ಒಂದೇ ಬಾರಿಗೆ ಮಾರುಕಟ್ಟೆಗೆ ತಂದ ಕಾರಣ ಟೊಮೆಟೊ ಬೆಲೆ ದಿಢೀರ್‌ ಕುಸಿಯಿತು. ಕಳೆದ ವಾರ ಪ್ರತಿ ಕ್ವಿಂಟಲ್‌ಗೆ ₹ 1,000 ರಿಂದ ₹1,500ಗೆ ಮಾರಾಟವಾಗಿದ್ದ ಟೊಮೆಟೊ ಬೆಲೆ ₹ 400 ರ ವರೆಗೆ ಕುಸಿದ ಕಾರಣ ರೈತರು ಆತಂಕ ಪಡುವಂತಾಯಿತು.

ಚಿಲ್ಲರೆ ಮಾರುಕಟ್ಟೆಯಲ್ಲೂ ಟೊಮೆಟೊ ಬೆಲೆ ಕುಸಿಯಿತು. ಟೊಮೆಟೊ ಸಾಸ್‌ ಮಾಡುವ ಘಟಕಗಳ ಮಾಲೀಕರು ಮಾತ್ರ ಉತ್ಸಾಹದಿಂದ ಟೊಮೆಟೊ ಕೊಂಡೊಯ್ದರು. ಬೀದರ್‌, ಭಾಲ್ಕಿ ಹಾಗೂ ನೆರೆಯ ತೆಲಂಗಾಣದ ಕೆಲ ಜಿಲ್ಲೆಗಳಿಂದ ಟೊಮೆಟೊ ಆವಕವಾಗಿದೆ.

‘ಮಳೆ ಬಾರದ ಕಾರಣ ಇಳುವರಿ ಕಡಿಮೆಯಾಗಿದೆ. ಇದ್ದ ಅಲ್ಪ ನೀರಿನಲ್ಲೇ ಕಾಳಜಿಯಿಂದ ಟೊಮೆಟೊ ಬೆಳೆಯುತ್ತಿದ್ದೇವೆ. ಕೂಲಿ ಹೆಚ್ಚಾಗಿ ಮಾಡಿದ ಖರ್ಚು ಸಹ ಬರುತ್ತಿಲ್ಲ’ ಎಂದು ಬೀದರ್ ತಾಲ್ಲೂಕಿನ ಹೊನ್ನಿಕೇರಿಯ ರೈತ  ರವೀಂದ್ರ ಪಾಟೀಲ ಹೇಳಿದರು.

ಗಜ್ಜರಿಯ ಬೆಲೆ ಈ ಬಾರಿ ಕ್ವಿಂಟಲ್‌ಗೆ ₹ 1,000ರ ವರೆಗೆ ಕುಸಿಯಿತು. ಆಲೂಗಡ್ಡೆ, ತೊಂಡೆಕಾಯಿ, ಭೆಂಂಡೆಕಾಯಿ ಹಾಗೂ ಹಿರೇಕಾಯಿ ಬೆಲೆ ಸ್ಥಿರವಾಗಿದೆ. ಸೋಲಾಪುರದ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 300 ಏರಿಕೆ ಕಂಡಿತು. ಮೆಣಸಿನಕಾಯಿ ಬೆಲೆ ಕ್ವಿಂಟಲ್‌ಗೆ ₹ 500 ಹೆಚ್ಚಳವಾಗಿ ಇನ್ನಷ್ಟು ಖಾರವಾಯಿತು. ಬದನೆಕಾಯಿ ಬೆಲೆ ಕ್ವಿಂಟಲ್‌ಗೆ ₹1,500 ರಿಂದ ₹ 2,000 ರ ವರೆಗೆ ಏರಿಕೆ ಕಂಡಿತು. ಕರಿಬೇವು ಹಾಗೂ ಕೊತಂಬರಿ ಸಹ ಮತ್ತಷ್ಟು ತುಟ್ಟಿಯಾದವು. ಬೆಳ್ಳೊಳ್ಳಿ ಸಹ ಸ್ವಲ್ಪ ಬೆಲೆ ಹೆಚ್ಚಿಸಿಕೊಂಡಿತು.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಆಲೂಗಡ್ಡೆ, ಹಿರೇಕಾಯಿ, ಈರುಳ್ಳಿ, ಬೆಳ್ಳೂಳ್ಳಿ ಬೀದರ್‌ ಮಾರುಕಟ್ಟೆಗೆ ಆವಕವಾಗಿದೆ. ಹೈದರಾಬಾದ್‌ನಿಂದ ತೊಂಡೆಕಾಯಿ ಹಾಗೂ ಬೀನ್ಸ್ ಬಂದಿವೆ. ಕಳೆದ ವಾರ ಹಿಗ್ಗಿದ ಹಿರೇಕಾಯಿ ಈ ಬಾರಿ ಮಾರುಕಟ್ಟೆಯಲ್ಲಿ ಕುಗ್ಗಿತು.

ಲಾತೂರ್‌ನಲ್ಲಿಮೆಣಸಿನಕಾಯಿ, ಔರಂಗಾಬಾದ್‌ನಲ್ಲಿ ಮೆಂತೆ ಸೊಪ್ಪಿನ ಬೆಲೆ ಪಾತಾಳ ಕಂಡಿದ್ದು, ಬೀದರ್‌ ಮಾರುಕಟ್ಟೆಯನ್ನು ಪ್ರವೇಶ ಮಾವೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮೆಂತೆ ಲಭಿಸುತ್ತಿದೆ. ನಾಸಿಕ್‌ನಿಂದ ಗಜ್ಜರಿ ಹಾಗೂ ಹೂಕೋಸು ಬಂದಿವೆ.

‘ಜಿಲ್ಲೆಯ ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಕೊತಂಬರಿ, ಕರಿಬೇವು ಹಾಗೂ ಬದನೆಕಾಯಿ ಮಾರುಕಟ್ಟೆ ಪ್ರವೇಶಿಸಿವೆ’ ಎಂದು ಇಂಡಿಯನ್ ತರಕಾರಿ ಅಂಗಡಿ ಮಾಲೀಕ ಅಹ್ಮದ್ ಪಾಷಾ ಹೇಳುತ್ತಾರೆ.


ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ, 1,000-1,200, 1,000-1,500,
ಮೆಣಸಿನಕಾಯಿ, 1,500-2,000, 2,000-2,500,
ಆಲೂಗಡ್ಡೆ, 1,500-2,000, 1,500-2,000,
ಎಲೆಕೋಸು, 800-1,000, 1,000-1,500,
ಬೆಳ್ಳೂಳ್ಳಿ , 2,000-2,500, 2,500-3,000,
ಗಜ್ಜರಿ, 3,500-4,000, 2,000-3,000,
ಬೀನ್ಸ್‌, 3,000-3,500, 3,000-4,000,
ಬದನೆಕಾಯಿ, 2,000-2,500, 3,000-4,000,
ಮೆಂತೆ ಸೊಪ್ಪು, 2,000-2,500, 1,000-1,500,
ಹೂಕೋಸು, 1,500-2,000, 2,000-2,400,
ಸಬ್ಬಸಗಿ 3,000-3,500, 3,000-4,000,
ಬಿಟ್‌ರೂಟ್‌, 3,500-4,000, 3,500-4,000,
ಕರಿಬೇವು, 3,000-3,500, 4,000-5,000,
ಕೊತಂಬರಿ, 3,000-3,500, 3,000-4,000,
ಟೊಮೆಟೊ 1,000-1,500, 400- 600,
ತೊಂಡೆಕಾಯಿ 2,500-3,000, 2,500-3,000,
ಭೆಂಂಡೆಕಾಯಿ 3,000-3,500, 3,000-3,500,
ಹಿರೇಕಾಯಿ 3,000-4,000, 3,000-3,500,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT