ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಲು ಒಕ್ಕೂಟದ ನಿರ್ದೇಶಕರಿಗೆ ಸನ್ಮಾನ

Published : 2 ಆಗಸ್ಟ್ 2024, 15:59 IST
Last Updated : 2 ಆಗಸ್ಟ್ 2024, 15:59 IST
ಫಾಲೋ ಮಾಡಿ
Comments

ಖಟಕಚಿಂಚೋಳಿ: ಹೋಬಳಿಯ ಬ್ಯಾಲಹಳ್ಳಿ (ಕೆ) ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶುಕ್ರವಾರ ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟದ ನೂತನ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೇವಣಸಿದ್ದಪ್ಪ ಪಾಟೀಲ, ‘ಗ್ರಾಮೀಣ ಪ್ರದೇಶದ ಸುಶಿಕ್ಷಿತರ ಹಾಗೂ ಅನಕ್ಷರಸ್ಥರ ಬದುಕನ್ನು ಆರ್ಥಿಕವಾಗಿ ಸದೃಢ­ಗೊಳಿಸಿದ ಕೀರ್ತಿ ಹೈನುಗಾರಿಕೆಗೆ ಸಲ್ಲುತ್ತದೆ. ಗ್ರಾಮಸ್ಥರು ವ್ಯವಸ್ಥಿತವಾಗಿ ಹಾಗೂ ಅತ್ಯಂತ ಸುಲಭ­ವಾಗಿ ಮಾಡಬಹುದಾದ ಉದ್ಯೋಗ ಹೈನು­ಗಾರಿಕೆಯಾಗಿದೆ’ ಎಂದರು.

‘ಗ್ರಾಮೀಣ ಭಾಗದ ಹಾಲು ಉತ್ಪಾದಕರ ಸರ್ವಾಂ­ಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ­ನಿರ್ವ­ಹಿಸಲು ಸದಾ ಸಿದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

ಹಾಲು ಒಕ್ಕೂಟದ ನಿರ್ದೇಶಕರಾದ ಬಸವಕಲ್ಯಾಣದ ಬಂಡುರಾವ್ ಕುಲಕರ್ಣಿ, ಭಾಲ್ಕಿಯ ನಾಗರಾಜ ಪಾಟೀಲ, ಪಂಚಾಳ ಸುನೀತಾ ಅವರನ್ನೂ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಹೈನುಗಾರಿಕೆ ಮಾಡುವವರಿಗೆ ಐದು ಲೀಟರ್ ಸಾಮರ್ಥ್ಯದ ಕ್ಯಾನ್ ಉಚಿತವಾಗಿ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT