ಉದ್ದು, ಹೆಸರು ನಿರ್ವಹಣೆ: ರೈತರಿಗೆ ತರಬೇತಿ

7

ಉದ್ದು, ಹೆಸರು ನಿರ್ವಹಣೆ: ರೈತರಿಗೆ ತರಬೇತಿ

Published:
Updated:
Deccan Herald

ಜನವಾಡ: ರಾಷ್ಟ್ರೀಯ ಆಹಾರ ಭದ್ರತಾ ಗುಚ್ಛ ಗ್ರಾಮ ಯೋಜನೆಯ ಅಡಿಯಲ್ಲಿ ಉದ್ದು ಹಾಗೂ ಹೆಸರು ಬೆಳೆಯ ಪ್ರಾತ್ಯಕ್ಷಿಕೆ ಕೈಗೊಂಡ ಗ್ರಾಮಗಳ ರೈತರಿಗೆ ಉದ್ದು ಹಾಗೂ ಹೆಸರು ಬೆಳೆಯ ಸಮಗ್ರ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮ ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆಯಿತು.

ಉದ್ದು ಮತ್ತು ಹೆಸರು ಬೆಳೆಯಲ್ಲಿ ಪೋಷಕಾಂಶಗಳ ಬಳಕೆ, ಪೋಷಕಾಂಶಗಳ ಕೊರತೆಯ ಲಕ್ಷಣ ಹಾಗೂ ನಿರ್ವಹಣೆ ಕುರಿತು ಮಣ್ಣು ವಿಜ್ಞಾನಿ ಡಾ. ಎಸ್.ರವಿ ಮಾಹಿತಿ ನೀಡಿದರು.

ಬೆಳೆಗೆ ಬಾಧಿಸುವ ಕೀಟಗಳು, ರೋಗಗಳು ಹಾಗೂ ಅವುಗಳ ಸಮಗ್ರ ನಿರ್ವಹಣೆ ಕುರಿತು ಕೀಟ ವಿಜ್ಞಾನಿ ಡಾ. ಸುನೀಲಕುಮಾರ ಎನ್.ಎಂ. ಮಾರ್ಗದರ್ಶನ ಮಾಡಿದರು.

ಬಳಿಕ ವಿಜ್ಞಾನಿಗಳು ರೈತರನ್ನು ಕೇಂದ್ರದ ಆವರಣದಲ್ಲಿ ಇರುವ ಹೆಸರು ಹಾಗೂ ಉದ್ದು ಬೆಳೆಗಳ ಪ್ರಾತ್ಯಕ್ಷಿಕೆಗಳಿಗೆ ಕರೆದೊಯ್ದು ಬೆಳೆಗಳಲ್ಲಿ ಕಂಡ ಬಂದ ವಿವಿಧ ಕೀಟ, ರೋಗಗಳ ಹತೋಟಿ ಹಾಗೂ ಪೋಷಕಾಂಶ ಕೊರತೆಯ ಲಕ್ಷಣ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.

ಸದ್ಯ ಮಳೆಯ ಕೊರತೆ ಇರುವ ಕಾರಣ ನೀರಾವರಿ ಸೌಲಭ್ಯ ಇರುವ ರೈತರು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಬೇಕು. ಎಡೆ ಹೊಡೆಯುವುದರಿಂದಲೂ ತೇವಾಂಶವನ್ನು ಹಿಡಿದಿಡಬಹುದು ಎಂದು ಸಲಹೆ ನೀಡಿದರು.

ಕೇಂದ್ರದ ವಿಜ್ಞಾನಿಗಳಾದ ಡಾ. ಕೆ. ಭವಾನಿ, ಡಾ. ಆರ್. ಎಲ್. ಜಾಧವ್, ಮಲ್ಲಿಕಾರ್ಜುನ ನಿಂಗದಳ್ಳಿ ಉಪಸ್ಥಿತರಿದ್ದರು. ಬೆನಕನಳ್ಳಿ, ಕಟ್ಟಿತೂಗಾಂವ್, ಬ್ಯಾಲಹಳ್ಳಿ ಹಾಗೂ ನಿಂಬೂರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !