ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಸಂರಕ್ಷಣೆಗೆ ಒಗ್ಗಟ್ಟು ಅವಶ್ಯಕ

Last Updated 7 ಡಿಸೆಂಬರ್ 2022, 15:26 IST
ಅಕ್ಷರ ಗಾತ್ರ

ಬೀದರ್: ಸಂವಿಧಾನ ಸಂರಕ್ಷಣೆಗೆ ಎಲ್ಲರೂ ಒಗ್ಗೂಡುವುದು ಅವಶ್ಯಕವಾಗಿದೆ ಎಂದು ಜಾತ್ಯತೀತ ಜನತಾ ದಳದ ಮುಖಂಡ ಖಾಜಾ ಶೇಕ್ ಅಜರ್ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸೇನೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಶೋಷಿತರ ಹಕ್ಕು ರಕ್ಷಣೆ ಹಾಗೂ ಮಹಿಳೆಯರ ವಿಮೋಚನೆ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದರಿಂದಲೇ ಎಲ್ಲ ರೀತಿಯ ಸ್ವಾತಂತ್ರ್ಯ ದೊರಕಿದೆ. ಆರ್.ಎಸ್.ಎಸ್, ಬಿಜೆಪಿ ಹಾಗೂ ಬಜರಂಗ ದಳದವರು ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಒಂದೊಂದು ಕಾಯ್ದೆ ರದ್ದುಗೊಳಿಸಲು ಮುಂದಾಗುತ್ತಿದೆ. ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗದವರು ಒಂದಾಗಿ ಸಂವಿಧಾನ ಸಂರಕ್ಷಣೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಕಲಬುರಗಿಯ ಡಾ. ವಿಠ್ಠಲ ವಗ್ಗನ, ದಲಿತ ಸೇನೆ ರಾಜ್ಯ ಮುಖಂಡ ನಾಗೇಂದ್ರ ಕೆ. ಜವಳಿ, ಪ್ರೊ. ಮಯೂರ ಬಸವರಾಜ, ಜೆಸ್ಕಾಂ ನೌಕರರ ಸಂಘದ ಸುಮಂತ ಕಟ್ಟಿಮನಿ ಮಾತನಾಡಿದರು.

ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ದಲಿತ ಸೇನೆ ರಾಜ್ಯ ಅಧ್ಯಕ್ಷ ಎಂ.ಎಸ್. ಜಗನ್ನಾಥ, ಉಪಾಧ್ಯಕ್ಷ ಚಂದ್ರಕಾಂತ ನಿರಾಟೆ, ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಸಂಗಮ, ಅಂಬಾದಾಸ ಗಾಯಕವಾಡ್, ಅಂಬಾದಾಸ ಸೋನಿ, ಗಂಗಮ್ಮ ಫುಲೆ, ಅನಿಲ್ ಗಂಜಕರ್, ಗೋವಿಂದ ಪೂಜಾರಿ, ಶಿವಕುಮಾರ ತುಂಗಾ, ರಾಜಕುಮಾರ ಗುನ್ನಳ್ಳಿ, ವಿಷ್ಣುವರ್ಧನ್ ವಾಲ್ದೊಡ್ಡಿ, ಖಾಜಾ ಮೈನೊದ್ದಿನ್, ಎಂ.ಡಿ. ಸಲೀಂ, ಸುರೇಶ ಘಾಂಗ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT