ಶುಕ್ರವಾರ, ಮೇ 20, 2022
21 °C
ಪ್ರಥಮ ವಿಮರ್ಶಾ ಸಮ್ಮೇಳನ, ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಆಯೋಜನೆ

ಮಾ.5, 6ಕ್ಕೆ ಉರಿಲಿಂಗಪೆದ್ದಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರ (ಹುಲಸೂರ): ‘ತಾಲ್ಲೂಕಿನ ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಮಾರ್ಚ್ 5 ಹಾಗೂ 6 ರಂದು ಉರಿಲಿಂಗಪೆದ್ದಿ ಉತ್ಸವ, ಲಿಂ.ಶಿವಲಿಂಗೇಶ್ವರ ಶಿವಯೋಗಿಗಳ 52ನೇ ಸ್ಮರಣೋತ್ಸವ ಹಾಗೂ ಪ್ರಥಮ ವಿಮರ್ಶಾ ಸಮ್ಮೇಳನ, ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ತಿಳಿಸಿದರು.

ಬೇಲೂರಿನಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಹೋಳಿಗೆ ತುಪ್ಪದ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದೂ ಹೇಳಿದರು.

ನಾಡಿನ ಸಾಹಿತಿ, ಕಲಾವಿದರನ್ನು, ರಾಜಕೀಯ ಮುಖಂಡರನ್ನು ಆಹ್ವಾನಿ ಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಕಾರ್ಯಾಧ್ಯಕ್ಷರನ್ನಾಗಿ ಜಗನ್ನಾಥ ಚಿಲ್ಲಾಬಟ್ಟೆ, ಸಂಯೋಜಕರನ್ನಾಗಿ ಡಾ.ಗವಿಸಿದ್ದಪ್ಪ ಪಾಟೀಲ, ಕೋಶಾಧ್ಯಕ್ಷರನ್ನಾಗಿ ಪ್ರದೀಪ ವಾತಡೆ ಅವರನ್ನು ನೇಮಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಚಿಂಚೋಳಿ ಸಿ.ಬಿ.ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಾಹಿತಿ ಡಾ.ಶ್ರೀಶೈಲ್ ನಾಗರಾಳ ಅವರನ್ನು ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

ಡಾ.ಗವಿಸಿದ್ದಪ್ಪ ಪಾಟೀಲ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೆಕರ್, ಸುರೇಶ ಮೋರೆ, ಅಶೋಕ ವಕಾರೆ, ರಾಜಕುಮಾರ ನಂದೋಡೆ, ರಾಮಣ್ಣ ಸಾಯಗಾವೆ, ಸಂಜೀವ ಖೇಲೆ, ಸುಭಾಷ ಮಚಕೂರಿ ಮಾತನಾಡಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಸಲಹೆ ನೀಡಿದರು.

ಭೀಮಶಾ ವಾಘ್ಮಾರೆ, ವಿನೋದ ಸಿಂಧೆ, ಸುಶೀಲ ಮಚಕೂರಿ, ರಾಕೇಶ ರಾಜಗುರು, ಪ್ರಶಾಂತ ವಾಘ್ಮಾರೆ, ಜಯದ್ರತ್ ಮೈಸಲಗೆ, ಸದಾನಂದ ಭೋಸ್ಲೆ, ಸಂದೀಪ ಮಚಕೂರಿ, ರಮೇಶ ಗೋಡಬೋಲೆ, ಅವಿನಾಶ ಬೆಳ್ಳೆ, ಸಂಗಮನಾಥ ಹೆಬ್ಬಾಳೆ, ಪ್ರಭು ಕರಾಳೆ, ಕೀರ್ತಿಪಾಲ ದಾಂಡಗೆ, ಶ್ರೀನಿವಾಸ ಬಿರಾದಾರ ಉಪಸ್ಥಿತರಿದ್ದರು. ನವನಾಥ ಬೆಳ್ಳೆ ನಿರೂಪಿಸಿದರು. ಗೌತಮ ವಾಘ್ಮಾರೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.