ಶುಕ್ರವಾರ, ಮೇ 27, 2022
23 °C

ಸಾಕು ಪ್ರಾಣಿಗಳಿಗೆ ಜಂತು ಹುಳು ನಿವಾರಣಾ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಾಕು ಪ್ರಾಣಿಗಳು ತಮ್ಮ ಮಾಲೀಕರಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಹಾಗಾಗಿ ಸಾಕು ಪ್ರಾಣಿಗಳು ತಮ್ಮ ಜೀವನದಲ್ಲಿ ಬಹಳ ಅರ್ಥಪೂರ್ಣವಾದ ಪಾತ್ರವನ್ನು ವಹಿಸುತ್ತದೆ’ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯ ಡೀನ್‌ ಡಾ.ದಿಲೀಪಕುಮಾರ ಡಿ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀದರ್‌ನ ಎಪಿಎಂಸಿ ಸಮೀಪ ಇರುವ ಪಶು ವೈದ್ಯಕೀಯ ಚಿಕಿತ್ಸಾ ಘಟಕದಲ್ಲಿ ವಿಶ್ವ ಸಾಕು ಪ್ರಾಣಿಗಳ ದಿನಾಚರಣೆ ಅಂಗವಾಗಿ ಸಾಕು ಪ್ರಾಣಿಗಳಿಗೆ ಜಂತು ಹುಳು ನಿವಾರಣಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಶು ವೈದ್ಯಕೀಯ ಚಿಕಿತ್ಸಾ ಘಟಕದ ಮುಖ್ಯಸ್ಥ ಡಾ.ವಿವೇಕ ಆರ್‌. ಕಸರಳ್ಳಿಕರ್‌ ಅವರು ಸಾಕುಪ್ರಾಣಿಗಳ ಪ್ರಾಮುಖ್ಯತೆ, ಕಾಳಜಿ ಮತ್ತು ಅವುಗಳ ನಿರ್ವಹಣೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ 20 ಸಾಕು ಪ್ರಾಣಿಗಳಿಗೆ ಜಂತು ನಿವಾರಣಾ ಲಸಿಕೆ ವಿತರಿಸಲಾಯಿತು. ಪಶುವೈದ್ಯಕೀಯ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.