ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಬೀನ್ಸ್‌ ಪಾರುಪತ್ಯ; ಹಿರೇಕಾಯಿಗೆ ದೊರೆಯದ ತರಕಾರಿ ಹಿರಿತನ

Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಬೀದರ್: ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್‌ ಪಾರುಪತ್ಯ ಮುಂದುವರಿದಿದೆ. ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರ ತಲುಪಿದರೂ ಮಾರುಕಟ್ಟೆಯಲ್ಲಿ ಹಿರಿತನ ಸಾಧಿಸಲು ಸಾಧ್ಯವಾಗಿಲ್ಲ. ಪ್ರಮುಖ ತರಕಾರಿಗಳ ಬೆಲೆ ಕ್ವಿಂಟಲ್‌ಗೆ ಕನಿಷ್ಠ ₹ 500 ರಿಂದ ಗರಿಷ್ಠ ₹ 2,500ರ ವರೆಗೆ ಹೆಚ್ಚಳವಾಗಿದೆ.

ಹಿರೇಕಾಯಿ ಬೆಲೆ ಕ್ವಿಂಟಲ್‌ಗೆ ಗರಿಷ್ಠ ₹ 2,500 ವರೆಗೆ ಏರಿದರೆ, ಎಲೆಕೋಸು ಹಾಗೂ ಪಾಲಕ್‌ ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ಗಜ್ಜರಿ, ಮೆಂತೆಸೊಪ್ಪು, ತೊಂಡೆಕಾಯಿ, ಟೊಮೆಟೊ ಬೆಲೆಯಲ್ಲಿ ₹ 500 ಹೆಚ್ಚಳವಾಗಿದೆ. ಈ ವಾರ ಹಸಿಮೆಣಸಿಕಾಯಿ, ಬದನೆಕಾಯಿ, ಸಬ್ಬಸಗಿ ಹಾಗೂ ಕರಿಬೇವು ಸೊಪ್ಪಿನ ಬೆಲೆ ಮಾತ್ರ ಸ್ಥಿರವಾಗಿದೆ.

ಹಿಂದಿನ ವಾರ ಮದುವೆ ಸಮಾರಂಭಗಳಿಂದಾಗಿಯೇ ಬೀನ್ಸ್‌ ಬೆಲೆ ಗಗನಕ್ಕೆ ಚಿಮ್ಮಿತ್ತು. ಗ್ರಾಹಕರು ಅಚ್ಚರಿ ಪಡುವಂತೆ ಮಾಡಿತ್ತು. ಬೆಲೆ ಹೆಚ್ಚಳದಿಂದ ಬೀನ್ಸ್ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 21 ಸಾವಿರಕ್ಕೆ ಏರುವ ಮೂಲಕ ತಲ್ಲಣ ಸೃಷ್ಟಿಸಿದ್ದ ಬೀನ್ಸ್‌ ಬೆಲೆ ಒಮ್ಮೆಲೆ ₹ 11 ಸಾವಿರಕ್ಕೆ ಕುಸಿದಿದೆ. ಆದರೂ, ಬೆಲೆ ಪೈಪೋಟಿಯಲ್ಲಿ ಇತರ ತರಕಾರಿಗಳಿಗಿಂತ ಮುಂದೆಯೇ ಇದೆ.

ಬಿಟ್‌ರೂಟ್‌ ಬೆಲೆ ಕ್ವಿಂಟಲ್‌ಗೆ ₹ 500, ಕೊತಂಬರಿ ₹ 2 ಸಾವಿರ, ಬೆಳ್ಳೊಳ್ಳಿ ಹಾಗೂ ಹೂಕೋಸು ₹ 1 ಸಾವಿರ ಕುಸಿದಿದೆ. ಜಿಲ್ಲೆಯಲ್ಲಿ ಬಿಸಿಲಿನ ಧಗೆ ಅಧಿಕವಾಗಿದ್ದು, ಬಿಸಿ ಗಾಳಿ ಬೀಸುತ್ತಿದೆ. ಹೀಗಾಗಿ ಬೇರೆ ಜಿಲ್ಲೆಗಳಿಂದ ಸೊಪ್ಪು ಬರುತ್ತಿಲ್ಲ. ತರಕಾರಿ ಬಂದರೂ ಅಲ್ಪಪ್ರಮಾಣದಲ್ಲಿ ಇದೆ.

ಹೈದರಾಬಾದ್‌ನಿಂದ ಗಜ್ಜರಿ, ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ, ಬೆಂಡೆಕಾಯಿ ಮಾರುಕಟ್ಟೆಗೆ ಬಂದಿವೆ. ಬೆಳಗಾವಿಯಿಂದ ಮೆಣಸಿನಕಾಯಿ, ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ ಆವಕವಾಗಿದೆ. ಜಿಲ್ಲೆಯಿಂದ ಹಿರೇಕಾಯಿ ಎಲೆಕೋಸು, ಹೂಕೋಸು, ಬದನೆಕಾಯಿ, ಮೆಂತೆ, ಸಬ್ಬಸಗಿ, ಕರಿಬೇವು, ಕೊತಂಬರಿ, ಟೊಮೆಟೊ, ಪಾಲಕ್‌ ಬಂದಿವೆ.

‘ಇನ್ನೂ ಎರಡು ವಾರ ತರಕಾರಿಗಳ ಬೆಲೆ ಕಡಿಮೆಯಾಗದು. ಒಂದೆರಡು ಬಾರಿ ಮಳೆ ಸುರಿದರೆ ಜಿಲ್ಲೆಯ ರೈತರು ತರಕಾರಿ ಬೆಳೆಯಲು ಆರಂಭಿಸಲಿದ್ದಾರೆ. ಅಲ್ಲಿಯ ವರೆಗೆ ಬೆಲೆಯ ಬಿಸಿ ಮುಂದುವರಿಯಲಿದೆ’ ಎಂದು ಭಾರತ ವೆಜಿಟೆಬಲ್‌ ಶಾಪ್‌ ಮಾಲೀಕ ಅಹಮ್ಮದ್‌ ಪಾಶಾ ಹೇಳುತ್ತಾರೆ.

ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಬೀನ್ಸ್‌ 20000–21000, 10000-12000
ಹಿರೇಕಾಯಿ 5000–5500, 7000-8000
ಈರುಳ್ಳಿ, 1000-1200, 1200-1500
ಮೆಣಸಿನಕಾಯಿ 5000-6000, 5000-6000
ಆಲೂಗಡ್ಡೆ 1600-1800, 1200-1600
ಎಲೆಕೋಸು 1500-2000, 2000-3000
ಬೆಳ್ಳೂಳ್ಳಿ 8000-10000, 8000-9000
ಗಜ್ಜರಿ 4000–4500, 4,000-5000
ಬದನೆಕಾಯಿ 4000–5000, 4000-5000
ಮೆಂತೆ ಸೊಪ್ಪು 6000–6500, 6000-7000
ಹೂಕೋಸು 5000–6000, 4000-5000
ಸಬ್ಬಸಗಿ 7000–8000, 7000-8000
ಬಿಟ್‌ರೂಟ್‌ 4000–4500, 3000-4000
ತೊಂಡೆಕಾಯಿ 3000–3500, 3000-4000
ಕರಿಬೇವು 2000–3000, 2000-3000
ಕೊತಂಬರಿ 6000–8000, 5000-6000
ಟೊಮೆಟೊ 4000–4500, 4000-5000
ಪಾಲಕ್‌ 2500–3000, 3000-4000
ಬೆಂಡೆಕಾಯಿ 2000–2500, 3000-3500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT