ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ನುಗ್ಗೆಕಾಯಿ, ಹಿಗ್ಗಿದ ಹಿರೇಕಾಯಿ: ಬೀದರ್‌ನಲ್ಲಿ ತರಕಾರಿ ದರ ಏರಿಕೆ

ಗ್ರಾಹಕರಿಗೆ ತರಕಾರಿ ರಾಜನ ಶಾಕ್
Last Updated 24 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಅಚ್ಚು ಮೆಚ್ಚಿನ ತರಕಾರಿಗಳೇ ಈ ವಾರ ಗ್ರಾಹಕರಿಗೆ ಶಾಕ್‌ ನೀಡಿವೆ. ಕೊತಂಬರಿ ಸೇರಿ ಸೊಪ್ಪುಗಳು ಬೆಲೆಯ ಅಟ್ಟ ಏರಿ ಕುಳಿತಿರುವುದನ್ನು ನೋಡಿ ನುಗ್ಗೆಕಾಯಿ ಸೆಟೆದು ನಿಂತಿದೆ. ಬೀನ್ಸ್ ಬೀಗಿದರೆ, ಹಿರೇಕಾಯಿ ಹಿರಿಹಿರಿ ಹಿಗ್ಗಿದೆ.

ತರಕಾರಿ ರಾಜ ಬದನೆಕಾಯಿ ಸಹ ಗ್ರಾಹಕನ ಪರವಾಗಿ ನಿಂತಿಲ್ಲ. ತನ್ನ ಕಿರೀಟದ ಮೇಲಿನ ಕೊಂಬನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ. ಕೊತಂಬರಿ ಇನ್ನಷ್ಟು ಘಮಘಮಿಸಿ ಗ್ರಾಹಕನ ನಿದ್ದೆ ಹಾಳು ಮಾಡಿದೆ.

ಸಬ್ಬಸಗಿ ಸೊಪ್ಪು ಶತಕ ಬೆಲೆಯ ಬಾರಿಸಿದರೆ, ಮೆಂತೆ, ಕೊತಂಬರಿ, ಬೀನ್ಸ್, ಹಿರೇಕಾಯಿ ಹಾಗೂ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹ 120ಗೆ ತಲುಪಿ ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ಹಬ್ಬ ಹರಿದಿನಗಳಿಲ್ಲದಿದ್ದರೂ ಬದನೆಕಾಯಿ ಬೆಲೆ ದುಪ್ಪಟ್ಟವಾಗಿದೆ. ಪ್ರತಿ ಕ್ವಿಂಟಲ್‌ಗೆ ಬದನೆಕಾಯಿ ಹಾಗೂ ಹಿರೇಕಾಯಿ ಬೆಲೆ ₹ 4 ಸಾವಿರ ಏರಿಕೆಯಾಗಿದೆ. ಸಬ್ಬಸಗಿ ಬೀನ್ಸ್, ನುಗ್ಗೆಕಾಯಿ ಬೆಲೆ ₹ 2 ಸಾವಿರ ಹೆಚ್ಚಾಗಿದೆ.

ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಬೆಂಡೆಕಾಯಿ, ಚವಳೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಮೆಂತೆ, ಕರಿಬೇವು, ಕೊತಂಬರಿ, ಪಾಲಕ್ ಬೆಲೆ ಸ್ಥಿರವಾಗಿದೆ. ಗಜ್ಜರಿ, ಟೊಮೆಟೊ ಹಾಗೂ ಡೊಣಮೆಣಸಿನಕಾಯಿ ಬೆಲೆ ಸ್ವಲ್ಪ ಇಳಿದಿದೆ. ಪ್ರತಿ ಕ್ವಿಂಟಲ್‌ಗೆ ಗಜ್ಜರಿ ಬೆಲೆ ₹ 4 ಸಾವಿರ, ಡೊಣಮೆಣಸಿನಕಾಯಿ ಹಾಗೂ ಟೊಮೆಟೊ ತಲಾ ₹ 2 ಸಾವಿರ ಕಡಿಮೆಯಾಗಿದೆ.

‘ಹೊಲದಲ್ಲಿ ನಾಟಿ ಮಾಡಿದ ತರಕಾರಿ ಸಸಿ ಫಲ ನೀಡಲು 45ರಿಂದ 60 ದಿನಗಳು ಬೇಕು. ಒಂದು ಹಂತದ ಫಸಲು ಈಗಾಗಲೇ ಮಾರುಕಟ್ಟೆಗೆ ಬಂದು ಹೋಗಿದೆ. ಅಂತರ ಕಾಯ್ದು ನಾಟಿ ಮಾಡಿದ ರೈತರ ತರಕಾರಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಅದು ಸಹ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗಿರುವ ಕಾರಣ ಸಹಜವಾಗಿಯೇ ತರಕಾರಿ, ಸೊಪ್ಪಿನ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ನುಗ್ಗೆಕಾಯಿ, ಚವಳೆಕಾಯಿ, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಜಿಲ್ಲೆಯ ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಕರಿಬೇವು, ಕೊತಂಬರಿ, ಬದನೆಕಾಯಿ, ಬೆಂಡೆಕಾಯಿ, ಎಲೆಕೋಸು ಹಾಗೂ ಸೊಪ್ಪು ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

ಈರುಳ್ಳಿ 20-30, 20-30
ಬೆಳ್ಳುಳ್ಳಿ 30-40, 30-40
ಆಲೂಗಡ್ಡೆ 20-30, 20-30
ಮೆಣಸಿನಕಾಯಿ 40-50, 40-50
ಎಲೆಕೋಸು 30-40, 30-40
ಹೂಕೋಸು 60-80, 60-80
ಗಜ್ಜರಿ 60-80, 30-40
ಬೀನ್ಸ್ 100-120,100-120
ಟೊಮೆಟೊ 50-60, 30-40

ಬದನೆಕಾಯಿ 30-40, 60-80
ಬೆಂಡೆಕಾಯಿ 50-60, 50-60
ಹಿರೇಕಾಯಿ 60-80, 100-120
ನುಗ್ಗೆಕಾಯಿ 100-120,100-120

ಡೊಣಮೆಣಸಿನ ಕಾಯಿ 50-60, 30-40
ಚವಳೆಕಾಯಿ 60-80, 60-80
ಸೌತೆಕಾಯಿ 20-30, 20-30
ತುಪ್ಪದ ಹಿರೇಕಾಯಿ 60-80, 60-80

ಮೆಂತೆ 100-120, 100-120
ಸಬ್ಬಸಗಿ 60-80, 80-100
ಕರಿಬೇವು 30-40, 30-40
ಕೊತಂಬರಿ 100-120, 100-120
ಪಾಲಕ್ 60-80, 60-80

ಪೇಟೆ ಧಾರಣಿ

(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)

ಕಡಲೆ ಕಾಳು ₹4041- ₹1489
ಉದ್ದಿನ ಕಾಳು ₹600- ₹7980
ಹೆಸರು ಕಾಳು ₹6400- ₹8030
ಜೋಳ ₹2600- ₹3300
ನುಚ್ಚು ಅಕ್ಕಿ ₹2300- ₹2900
ಅಕ್ಕಿ ₹4400- ₹6000
ಸೋಯಾಬಿನ್ ₹5000- ₹5115
ತೊಗರಿ ₹5444- ₹7589
ಗೋಧಿ ₹2000- ₹3200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT