ಬರದಲ್ಲಿ ಮತ್ತೆ ಹಿರೇಕಾಯಿ ಹಿರಿತನ; ಬಹುತೇಕ ತರಕಾರಿ ಬೆಲೆ ಏರಿಕೆ

ಶುಕ್ರವಾರ, ಮೇ 24, 2019
29 °C

ಬರದಲ್ಲಿ ಮತ್ತೆ ಹಿರೇಕಾಯಿ ಹಿರಿತನ; ಬಹುತೇಕ ತರಕಾರಿ ಬೆಲೆ ಏರಿಕೆ

Published:
Updated:
Prajavani

ಬೀದರ್: ಬೀದರ್ ಜಿಲ್ಲೆ, ನೆರೆಯ ವಿದರ್ಭ, ತೆಲಂಗಾಣದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬಿಸಿಗಾಳಿ ಬೀಸುತ್ತಿರುವ ಕಾರಣ ತರಕಾರಿಯಲ್ಲೂ ತೇವಾಂಶದ ಕೊರತೆ ಉಂಟಾಗಿದೆ. ದೂರದ ಊರುಗಳಿಂದ ವಾಹನಗಳಲ್ಲಿ ಹೊತ್ತು ತರುವಷ್ಟರಲ್ಲೇ ತರಕಾರಿ ಬಾಡುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಏರಿದೆ.

ಈ ವಾರ ಹಿರೇಕಾಯಿ, ಕೊತಂಬರಿ ಹಾಗೂ ಬೆಳ್ಳೂಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರ ತಲುಪಿತು. ಹಿರೇಕಾಯಿ ಗರಿಷ್ಠ ಬೆಲೆ ಪಡೆದು ಹಿರಿಹಿರಿ ಹಿಗ್ಗಿತು. ಕೊತಂಬರಿ ಹಾಗೂ ಬೆಳ್ಳೂಳ್ಳಿ ಬೆಲೆ ಸಮರದಲ್ಲಿ ಘನತೆಯನ್ನು ಹೆಚ್ಚಿಸಿಕೊಂಡವು. ಹನಿ ನೀರಾವರಿ ಸೌಲಭ್ಯ ಪಡೆದು ಹಿರೇಕಾಯಿ ಬೆಳೆಸಿದ ರೈತರು ಈ ಬಾರಿ ಕೈತುಂಬ ಆದಾಯ ಪಡೆಯಲು ಸಾಧ್ಯವಾಯಿತು.

ಕಳೆದ ವಾರಕ್ಕೆ ಹೋಲಿಸಿದರೆ ಹಿರೇಕಾಯಿ, ಬೆಂಡೆಕಾಯಿ, ಹಸಿ ಮೆಣಸಿನಕಾಯಿ, ಬೀನ್ಸ್, ಪಾಲಕ್‌, ಕೊತಂಬರಿ ಹಾಗೂ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಳವಾಯಿತು. ಟೊಮೆಟೊ ಬೆಲೆ ಮಾತ್ರ ₹ 2 ಸಾವಿರ ವರೆಗೆ ಏರಿಕೆ ಕಂಡಿತು. ₹ 4 ಸಾವಿರ ಇದ್ದ ಬೆಳ್ಳೊಳ್ಳಿ ಬೆಲೆ ದಿಢೀರ್‌ ದುಪ್ಪಟ್ಟಾಗಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿತು.

ಬಿಸಿಲಿಗೆ ಬಾಡಿದ ಕಾರಣ ಸಬ್ಬಸಗಿ ಸೊಪ್ಪಿನ ಬೆಲೆ ಕ್ವಿಂಟಲ್‌ಗೆ ₹ 500 ಕುಸಿದರೆ, ಈರುಳ್ಳಿ ₹ 300 ಹಾಗೂ ಎಲೆಕೋಸು ಬೆಲೆ ₹ 200 ಇಳಿಯಿತು.

ಮಹಾರಾಷ್ಟ್ರದ ಸೋಲಾಪೂರದಿಂದ ಸ್ಥಳೀಯ ಮಾರುಕಟ್ಟೆಗೆ ಈರುಳ್ಳಿ, ಬೆಂಡೆಕಾಯಿ, ಆಲೂಗಡ್ಡೆ, ಹಿರೇಕಾಯಿ, ಬೆಳ್ಳೂಳ್ಳಿ
ಆವಕವಾಗಿದೆ. ಹೈದರಾಬಾದ್‌ನಿಂದ ಗಜ್ಜರಿ, ಬೀನ್ಸ್, ಟೊಮೆಟೊ, ತೊಂಡೆಕಾಯಿ, ಬಿಟ್‌ರೂಟ್‌, ಹೂಕೋಸು, ಆಗ್ರಾ ಹಾಗೂ ಬೆಳಗಾವಿಯಿಂದ ಮೆಣಸಿನಕಾಯಿ ಬಂದಿವೆ.

‘ಬೀದರ್ ತರಕಾರಿ ಸಗಟು ಮಾರುಕಟ್ಟೆಗೆ ಕರಿಬೇವು, ಕೊತಂಬರಿ, ಹೂಕೋಸು ಹಾಗೂ ಟೊಮೆಟೊ ಪೂರೈಸಿದ ಹುಮನಾಬಾದ್‌ ಹಾಗೂ ಚಿಟಗುಪ್ಪ ತಾಲ್ಲೂಕಿನ ರೈತರಿಗೆ ಉತ್ತಮ ಆದಾಯ ದೊರೆತಿದೆ’ ಎಂದು ಇಂಡಿಯನ್‌ ವೆಜಿಟೆಬಲ್‌ ಶಾಪ್‌ ಮಾಲೀಕ ಅಹಮ್ಮದ್‌ಪಾಷಾ ಹೇಳುತ್ತಾರೆ.

ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ, 800-1200, 1200-1500
ಮೆಣಸಿನಕಾಯಿ 4000-5000, 5000-6000
ಆಲೂಗಡ್ಡೆ 1000-1500, 1200-1800
ಎಲೆಕೋಸು 1000-1200, 800-1000
ಬೆಳ್ಳೂಳ್ಳಿ 3000-4000, 5000-8000
ಗಜ್ಜರಿ 3000-4000, 4000-4500
ಬೀನ್ಸ್‌ 7000-8000 8000-9000
ಬದನೆಕಾಯಿ 3000-4000, 4000-4500
ಮೆಂತೆ ಸೊಪ್ಪು 4000-5000, 5000-6000
ಹೂಕೋಸು 5000-5500, 5500-6000
ಸಬ್ಬಸಗಿ 3000-4000, 3000-3500
ಬಿಟ್‌ರೂಟ್‌ 3000-4000, 4000-4500
ತೊಂಡೆಕಾಯಿ 3000-4000, 4000-4500
ಕರಿಬೇವು 3000-4000, 4000-4500
ಕೊತಂಬರಿ 6000-7000, 7000-8000
ಟೊಮೆಟೊ 2000-3000, 4000-5000
ಪಾಲಕ್‌ 3000-4000, 4000-5000
ಬೆಂಡೆಕಾಯಿ 3500-4000, 4000-5000
ಹಿರೇಕಾಯಿ 6000-7000, 7000-8000

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !