ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಇಳಿದ ಈರುಳ್ಳಿ, ನುಗ್ಗೆಕಾಯಿ

ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡ ತರಕಾರಿ ರಾಜ
Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಬಹುತೇಕರು ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ಕೆಲವರು ಮನೆಗಳಲ್ಲೇ ಸ್ಪೆಶಲ್‌ ಊಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾರೊಬ್ಬರೂ ಕೇವಲ ತರಕಾರಿ ಸೇವಿಸಿ ವರ್ಷಾಚರಣೆ ಮಾಡುವ ಮೂಡ್‌ನಲ್ಲಿ ಇಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬೆಲೆ ಏರಿಸಿಕೊಂಡು ಕುಳತರೆ ಪ್ರಯೋಜನವಿಲ್ಲವೆಂದು ನುಗ್ಗೆಕಾಯಿ ಕಾವು ಇಳಿಸಿಕೊಂಡರೆ, ಈರುಳ್ಳಿ ಖಾರ ಕಡಿಮೆ ಮಾಡಿಕೊಂಡಿದೆ.

ಹಿರೇಕಾಯಿ ಹಿರೇತನದಿಂದ ಅಂತರ ಕಾಯ್ದುಕೊಂಡಿದೆ. ತರಕಾರಿ ರಾಜ ಬದನೆಕಾಯಿ ಸ್ಥಿರತೆ ಕಾಯ್ದುಕೊಂಡ ಮೇಲೆ ನಮ್ಮ ಕೊಂಬು ಇದ್ದರೇನು, ಬಿಟ್ಟರೇನು ಎಂದು ಅರ್ಥ ಮಾಡಿಕೊಂಡು ಬೆಂಡೆಕಾಯಿ, ಸೌತೆಕಾಯಿ ಸಹ ಬೆಲೆ ಇಳಿಸಿಕೊಂಡಿವೆ. ಬೆಲೆ ವಿಚಾರದಲ್ಲಿ ರಾಜನ ನಿರ್ಧಾರಕ್ಕೆ ಬೆಂಬಲ ನೀಡಿವೆ.

ಬೆಳ್ಳುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಹಿರೇಕಾಯಿ, ತುಪ್ಪದ ಹಿರೇಕಾಯಿ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್ ಬೆಲೆ ಸ್ಥಿರವಾಗಿದೆ.

ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರ, ಬದನೆಕಾಯಿ, ಮೆಂತೆ, ಪಾಲಕ್ ₹ 3 ಸಾವಿರ, ಬೆಂಡೆಕಾಯಿ, ಸೌತೆಕಾಯಿ, ₹ 2 ಸಾವಿರ, ಈರುಳ್ಳಿ, ಟೊಮೆಟೊ, ಸಬ್ಬಸಗಿ, ಕೊತಂಬರಿ ಬೆಲೆ ₹ 1 ಸಾವಿರ ಇಳಿದಿದೆ. ಕರಿಬೇವು ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ.

‘ಹೈದರಾಬಾದ್, ಮಹಾರಾಷ್ಟ್ರದ ನಾಸಿಕ್, ಜಾಲನಾದಿಂದ ತರಕಾರಿ ಬಂದಿರುವ ಕಾರಣ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತವಾಗಿದೆ. ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

.......................................................................
ಈರುಳ್ಳಿ 50-60, 40-50
ಬೆಳ್ಳುಳ್ಳಿ 25-30, 25-30
ಆಲೂಗಡ್ಡೆ 30-40, 30-40
ಮೆಣಸಿನಕಾಯಿ 40-50, 40-50
ಎಲೆಕೋಸು 20-30, 20-30
ಹೂಕೋಸು 30-40, 20-30
ಗಜ್ಜರಿ 30-40, 30-40
ಬೀನ್ಸ್ 50-60, 50-60
ಟೊಮೆಟೊ 10-20, 5-10

ಬದನೆಕಾಯಿ 40-50, 20-30
ಬೆಂಡೆಕಾಯಿ 30-40, 50-60
ಹಿರೇಕಾಯಿ 30-40, 30-40
ನುಗ್ಗೆಕಾಯಿ 210-220,100-120

ಡೊಣಮೆಣಸಿನ ಕಾಯಿ 30-40, 30-40
ಚವಳೆಕಾಯಿ 50-60,50-60
ಸೌತೆಕಾಯಿ 50-60, 30-40
ತುಪ್ಪದ ಹಿರೇಕಾಯಿ 30-40, 30-40

ಮೆಂತೆ 50-60, 20-30
ಸಬ್ಬಸಗಿ 30-40, 20-30
ಕರಿಬೇವು 60-70, 60-80
ಕೊತಂಬರಿ 20-30, 10-20
ಪಾಲಕ್ 50-60, 20-30

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
ಕಡಲೆ ಕಾಳು – ₹ 4,300 ₹ 4,400
ಹೆಸರು ಕಾಳು ₹ 6,500,- ₹ 7,300
ಜೋಳ ₹ 3,000- ₹ 4,500
ನುಚ್ಚು ಅಕ್ಕಿ ₹ 2,400- ₹ 2,900

ಅಕ್ಕಿ ₹ 4,500- ₹ 6,000
ಸೋಯಾಬಿನ್ ₹ 5,100- ₹ 5,400
ಗೋಧಿ ₹ 2,000- ₹ 3,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT