ಕನ್ನಡದಲ್ಲಿ ಮಾತು ಆರಂಭಿಸಿದ ಉಪರಾಷ್ಟ್ರಪತಿ
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. ‘ಭಾರತ ಮಾತೆಯ ಪಾದಗಳಿಗೆ ನಮಸ್ಕರಿಸುವೆ’ ಎನ್ನುವುದರೊಂದಿಗೆ ಕನ್ನಡದಲ್ಲಿ ಮಾತು ಆರಂಭಿಸಿ, ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲರ ಹೆಸರುಗಳನ್ನು ಕನ್ನಡದಲ್ಲಿ ಹೇಳಿ ನಮಸ್ಕರಿಸಿದರು. ಆನಂತರ ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದರು. ಕನ್ನಡದಲ್ಲಿ ಅದನ್ನು ಅನುವಾದ ಮಾಡಲಾಯಿತು.