ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಕಾವಿನಲ್ಲಿ ತರಕಾರಿ ಬೆಲೆಯೂ ಏರಿಕೆ

ಬಿಸಿಲಿಗೆ ಕೆಂಪಾದ ಟೊಮೆಟೊ
Last Updated 5 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೀದರ್‌: ಹೈದರಾಬಾದ್‌ ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಹೀಗಾಗಿ ನೆರೆ ಜಿಲ್ಲೆಗಳಿಂದಲೂ ಬೀದರ್‌ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಬರುತ್ತಿಲ್ಲ. ಚುನಾವಣೆ ಕಾವಿನಲ್ಲಿ ತರಕಾರಿ ಬೆಲೆಯೂ ಏರಿದೆ.

ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ಅತಿ ಹೆಚ್ಚು ₹ 4,500 ಏರಿದೆ. ಜಿಲ್ಲೆಯ ಅಚ್ಚುಮೆಚ್ಚಿನ ಬದನೆಕಾಯಿ ₹ 2 ಸಾವಿರ, ಹೋಟೆಲ್‌ ಮಾಲೀಕರ ಪ್ರೀತಿಯ ಎಲೆಕೋಸು ₹ 1,600, ಹಿರೇಕಾಯಿ 1,500, ತೊಂಡೆಕಾಯಿ ಬೆಲೆ ₹ 1,500 ಹೆಚ್ಚಿದೆ.
ಮೆಣಸಿನಕಾಯಿ ಮತ್ತು ಬೆಂಡೆಕಾಯಿ ₹ 1 ಸಾವಿರ, ಆಲೂಗಡ್ಡೆ, ಬೆಳ್ಳೂಳ್ಳಿ, ಚೌಳೆಕಾಯಿ ₹ 500, ಗಜ್ಜರಿ, ಈರುಳ್ಳಿ ₹ 200, ಟೊಮೆಟೊ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಿಂದ ಬೆಲೆ ಇಲ್ಲದೆ ಹಾನಿ ಅನುಭವಿಸುತ್ತಿದ್ದ ರೈತರಿಗೆ ಕೊನೆಯ ಗಳಿಗೆಯಲ್ಲಿ ಉತ್ತಮ ಬೆಲೆ ದೊರೆತಿದೆ.

ಸೊಪ್ಪು ಹೆಚ್ಚು ಮಾರುಕಟ್ಟೆಗೆ ಬರುತ್ತಿಲ್ಲ. ದೂರದ ಜಿಲ್ಲೆಗಳಿಂದ ಬಂದಿರುವ ಕೊತಂಬರಿ, ಪಾಲಕ್‌ ಹಾಗೂ ಬಿಟ್‌ರೂಟ್ ಬೆಲೆ ಸಾಗಣೆಯ ವೆಚ್ಚದಿಂದಾಗಿ ದುಪ್ಪಟ್ಟು ಆಗಿದೆ. ಕೊತಂಬರಿ ಇಲ್ಲದೆ ಅಡಿಗೆಯ ಸ್ವಾದವನ್ನು ಹೆಚ್ಚಿಸಲು ಸಾಧ್ಯವಾಗದು. ಕೊತಂಬರಿ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಹೆಚ್ಚು ಬೇಸರ ಪಡುವಂತಾಯಿತು.

ಇಡೀ ಮಾರುಕಟ್ಟೆಯಲ್ಲಿ ಹೂಕೋಸು ಹಾಗೂ ಕರಿಬೇವು ಬೆಲೆ ಮಾತ್ರ ಸ್ಥಿರವಾಗಿದೆ. ಹೈದರಾಬಾದ್‌ನಿಂದ ಗಜ್ಜರಿ, ಬೀನ್ಸ್, ತೊಂಡೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಚೌಳೆಕಾಯಿ ಮಾರುಕಟ್ಟೆಗೆ ಆವಕವಾಗಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳೂಳ್ಳಿ , ಆಲೂಗಡ್ಡೆ, ಮೆಂತೆಸೋಪ್ಪು ಹಾಗೂ ಬೆಳಗಾವಿಯಿಂದ ಮೆಣಸಿನಕಾಯಿ ಬಂದಿದೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಎಲೆಕೋಸು, ಬದನೆಕಾಯಿ, ಸಬ್ಬಸಗಿ, ಕರಿಬೇವು, ಕೊತಂಬರಿ ಹಾಗೂ ಪಾಲಕ್‌ ಸೊಪ್ಪು ಬಂದಿದೆ. ನಿರೀಕ್ಷೆಯಂತೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ಪಾಶಾ ವೆಜಿಟೆಬಲ್ ಶಾಪ್‌ನ ಮಾಲೀಕ ಅಹಮ್ಮದ್‌ ಪಾಶಾ ಹೇಳುತ್ತಾರೆ.


ಬೀದರ್‌ ತರಕಾರಿ ಸಗಟು ಮಾರುಕಟ್ಟೆ
..................................................................................
ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ 600-800, 1,000-1,500
ಮೆಣಸಿನಕಾಯಿ 4,000-5,000, 5,000-6,000
ಆಲೂಗಡ್ಡೆ 800-1,300, 1,200-1,800
ಎಲೆಕೋಸು 1,200-1,400, 2,000-3,000
ಬೆಳ್ಳೂಳ್ಳಿ 3,500-4,500, 4,000-5,000
ಗಜ್ಜರಿ 2,500–3,000, 4,000-5,000
ಬೀನ್ಸ್‌ 7,000–8,000, 8,000-10,000
ಬದನೆಕಾಯಿ 2,500-3,000, 4,000-5,000
ಮೆಂತೆ ಸೊಪ್ಪು 3,000-3,500, 5,000-6,000
ಹೂಕೋಸು 2,500-3,000, 2,500-3,000
ಬಿಟ್‌ರೂಟ್‌ 2,000-2,500, 4,000-5,000
ತೊಂಡೆಕಾಯಿ 3,000–3,500, 3,000-4,000
ಕರಿಬೇವು 5,000–6,000, 5,000-6,000
ಕೊತಂಬರಿ 4,000–4,500, 8,000-9,000
ಟೊಮೆಟೊ 800-1,000, 2,000-3,000
ಪಾಲಕ್‌ 1,500-2,000, 3,000-4,000
ಬೆಂಡೆಕಾಯಿ 2,500-3,000, 3,000-4,000
ಹಿರೇಕಾಯಿ 4,000-4,500, 5,000-6,000
ಡೊಣ್ಣ ಮೆಣಸಿನಕಾಯಿ 4,000-4,500, 5,000-6,000
ಚೌಳೆಕಾಯಿ 2,500–3,000, 3,000-3,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT