ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ ಭಾರತೀಯ ಸಂಸ್ಕೃತಿಯ ಪ್ರತೀಕ; ಹಾವಗಿಲಿಂಗೇಶ್ವರ ಶಿವಾಚಾರ್ಯ

Last Updated 11 ಫೆಬ್ರುವರಿ 2022, 4:45 IST
ಅಕ್ಷರ ಗಾತ್ರ

ಭಾಲ್ಕಿ: ವೀರಭದ್ರೇಶ್ವರನ ನೆನೆದರೆ ಭಕ್ತರ ಸಂಕಷ್ಟಗಳು ದೂರ ಆಗುತ್ತವೆ ಎಂದು ಹಲಬರ್ಗಾದ ರಾಚೋಟೇಶ್ವರ ಸಂಸ್ಥಾನ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.

ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಶೇ 90ರಷ್ಟು ಭಕ್ತರ ಕುಲದೇವರು ವೀರಭದ್ರೇಶ್ವರ ಆಗಿದ್ದಾರೆ. ಶಿವನ ಜಡೆಯಿಂದ ಜನಿಸಿದ ವೀರಭದ್ರೇಶ್ವರರನ್ನು ಆಂಜನೇಯನನ್ನು ಗುರುವಾಗಿಸಿಕೊಂಡಿದ್ದರು. ಅವರಿಂದ ದೀಕ್ಷೆ ಪಡೆದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಖಜಾಂಚಿ ಶಿವಶಂಕರ ಟೋಕರೆ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಶ್ರೀಕಾಂತ ದಾನಿ, ವೀರಭದ್ರೇಶ್ವರ ಪೆಟ್ರೋಲ್ ಬಂಕ್ ಮಾಲೀಕ ವೈಜಿನಾಥ ಮೂಲಗೆ, ಮುಖಂಡರಾದ ಬಾಬುರಾವ್ ದಾನಿ, ಚಲನಚಿತ್ರ ನಿರ್ದೇಶಕ ಬಿ.ಜೆ. ವಿಷ್ಣುಕಾಂತ ಇದ್ದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಜಯಂತಿ ಆಚರಣೆ

ಬೀದರ್: ನೌಬಾದನ್‌ ಶಿವಶರಣ ಮಾದಾರ ಚನ್ನಯ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಕರ್ನಾಟಕ ಮಾದಿಗ ವೆಲ್‌ಫೇರ್ ಆಸೋಸಿಯೇಷನ್‌ನ ಜಿಲ್ಲಾ ಸಮಿತಿಯ ವತಿಯಿಂದ ಕಾಯಕಯೋಗಿ ಮಾದಾರ ಚನ್ನಯ್ಯ ಅವರ 971ನೇ ಜಯಂತಿ ಆಚರಿಸಲಾಯಿತು.

ಭಾರತ ಸಂವಿಧಾನದ ಪಿಠಿಕೆ ಓದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿವೃತ್ತ ಅಧಿಕಾರಿ ಪ್ರೊ.ಸಿ.ಕೆ. ಮಹೇಶ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಬಿಜೆಪಿ ಯುವ ಮುಖಂಡ ಬ್ಯಾಂಕ್ ರೆಡ್ಡಿ ಆಗಮಿಸಿದ್ದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಕೆ.ಗೋಖಲೆ, ಕಲಬುರಗಿಯ ಮಾದಾರ ಚನ್ನಯ್ಯ ವಧು-ವರರ ಕೇಂದ್ರದ ಅಧ್ಯಕ್ಷ ಡಾ.ಎಂ. ಕಟ್ಟಿಮನಿ, ರಮೇಶ ಕಟ್ಟಿ ತೂಗಾಂವ, ದತ್ತು ಸೂರ್ಯವಂಶಿ, ಶಶಿಕಾಂತ ಪೊಲೀಸ್ ಪಾಟೀಲ, ಸುಮಂತ ಕಟ್ಟಿಮನಿ, ಸುರೇಶ ಎನ್.ದೊಡ್ಡಿ, ಪ್ರಕಾಶ ಹಳ್ಳಿಖೇಡ, ಕಮಲ ಹಸನ ಬಾವಿದೊಡ್ಡಿ, ವಿಲ್ಸನ್ ಕುಡತೆನೋರ್, ನವೀನ್ ಅಲ್ಲಾಪೂರ, ಸಂಜು ಉಜನಿ ಇದ್ದರು.

ಸಂಗಮೇಶ ಯಣಕೂರ ನಿರೂಪಿಸಿದರು. ತುಕಾರಾಮ ರಾಗಾಪೂರೆ ವಂದಿಸಿದರು.

‌‘ಅಂಬೇಡ್ಕರ್‌ ಸಿದ್ಧಾಂತ ಪಾಲಿಸಿ’

ಬೀದರ್‌: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ.ಕೆ. ತಾಂದಳೆ ಹೇಳಿದರು.

ಜೈ ಹಿಂದ್ ಹಿರಿಯ ನಾಗರಿಕರ ಸಂಘದಲ್ಲಿ ಗುರುವಾರ ನಿವೃತ್ತ ಅಧಿಕಾರಿ ನಾರಾಯಣರಾವ್ ಕಾಂಬಳೆ ಅವರ ಭೀಮಗೀತೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಎಸ್.ವಿ.ಕಲ್ಮಠ ಅವರು ಸಿ.ಡಿ ಬಿಡುಗಡೆ ಮಾಡಿದರು. ನಿವೃತ್ತ ಸಹಾಯಕ ಆಯುಕ್ತ ಮಲ್ಲಿಕಾರ್ಜುನಪ್ಪ ಹತ್ತಿ ಮಾತನಾಡಿದರು.

ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ, ರಾಜೇಂದ್ರಸಿಂಗ್ ಪವಾರ್, ಎಸ್.ಆರ್. ಬಂಡಿ, ಪ್ರಕಾಶ ಕುಲಕರ್ಣಿ. ರಾಮಚಂದ್ರ, ಭೀಮಾಶಂಕರ, ಮಹಾಲಿಂಗಪ್ಪ ಬೆಲ್ದಾಳೆ, ಶಂಕರರಾವ್ ಚಿದ್ರಿ, ಸಂಗಶೆಟ್ಟಿ ಜಗದೇವ, ಗಂಗಾಧರ ಪಾಟೀಲ ಇದ್ದರು. ಕಾಂಬಳೆ ಸ್ವಾಗತಿಸಿದರು. ವೀರಭದ್ರಪ್ಪ ಉಪ್ಪಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಪ್ಪ ಸಾವಳೆ ವಂದಿಸಿದರು.

ಕೌಶಲ ತರಬೇತಿ

ಹುಮನಾಬಾದ್: ಕೌಶಲ ತರಬೇತಿಯುಗ್ರಾಮೀಣ ಭಾಗದ ಮಹಿಳೆಯರ ಜೀವನೋಪಾಯಕ್ಕೆ ಸಹಕಾರಿ ಆಗಲಿದೆ ಎಂದು ಆರ್ಬಿಟ್ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಸ್ ಹೇಳಿದರು.

ತಾಲ್ಲೂಕಿನ ಹಿಲಾಲಪೂರ ಗ್ರಾಮದಲ್ಲಿ ಈಚೆಗೆ ಆರ್ಬಿಟ್ ಸಂಸ್ಥೆ ಹಾಗೂ ಮಿಸ್ಸೊ ಆಯೋಜಿಸಿದ್ದ ಬಟ್ಟೆ ತಯಾರಿಕ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ವ್ಯವಸ್ಥಾಪಕಿ ಸಿಸ್ಟರ್ ಮಿನಿ ಮ್ಯಾಥ್ಯೂ ಮಾತನಾಡಿದರು. ಸರ್ಕಾರಿ ಶಾಲೆ ಶಿಕ್ಷಕಿ ಗೀತಾ, ಅಂಗನವಾಡಿ ಕಾರ್ಯಕರ್ತೆ ಶಾಂತಾ, ಸಿಎಚ್ಒ ಚುಕ್ಕೆಮ್ಮ, ಆಶಾಕಾರ್ಯಕರ್ತೆಯರಾದ ರೇಣುಕಾ, ನಿರ್ಮಲಾ, ಸುನಿತಾ, ಅಮಿತಾ ಇದ್ದರು.

ತರಬೇತಿ

ಜನವಾಡ: ’ವೈಜ್ಞಾನಿಕ ಕೊಟ್ಟಿಗೆ ಪದ್ಧತಿಯ ಆಡು ಸಾಕಣೆಯು ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಸೋಮಶೇಖರ ಹೇಳಿದರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡು ಸಾಕಣೆ ಯಿಂದ ರೈತರಿಗೆ ಗೊಬ್ಬರ ದೊರಕುತ್ತದೆ. ಆದಾಯವೂ ಹೆಚ್ಚುತ್ತದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಣಿಶಾಸ್ತ್ರ ವಿಜ್ಞಾನಿ ಡಾ. ಅಕ್ಷಯಕುಮಾರ, ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಭೀಮಾಶಂಕರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT