ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುಕಾಂತ ವೇಗದ ಓಟಗಾರ

ಬೀದರ್ ತಾಲ್ಲೂಕುಮಟ್ಟದ ಕ್ರೀಡಾಕೂಟ
Last Updated 4 ಜನವರಿ 2023, 12:31 IST
ಅಕ್ಷರ ಗಾತ್ರ

ಬೀದರ್: ಬೀದರ್ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿಷ್ಣುಕಾಂತ ವೇಗದ ಆಟಗಾರರಾಗಿ ಹೊರಹೊಮ್ಮಿದರು.

ನೆಹರೂ ಯುವ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅವರು ಪ್ರಥಮ ಸ್ಥಾನ ಗಳಿಸಿದರು.

200 ಮೀಟರ್ ಓಟದಲ್ಲಿ ಪುರುಷರ ವಿಭಾಗದಲ್ಲಿ ಬಲವಂತ ಮತ್ತು ಮಹಿಳಾ ವಿಭಾಗದಲ್ಲಿ ಪಾರ್ವತಿ ಪ್ರಥಮ ಸ್ಥಾನ ಪಡೆದರು.
ಪುರುಷರ ವಿಭಾಗದ ಗುಂಡು ಎಸೆತದಲ್ಲಿ ವೀರೇಂದ್ರ, ಹಗ್ಗದಾಟದಲ್ಲಿ ರಾಹುಲ್ ಪ್ರಥಮ ಸ್ಥಾನ ಗಳಿಸಿದರು. ವಾಲಿಬಾಲ್‍ನಲ್ಲಿ ಮದರ್ ತೆರೆಸಾ ತಂಡ ಮತ್ತು ಕಬಡ್ಡಿಯಲ್ಲಿ ಕೊಳಾರ(ಕೆ) ತಂಡ ಪ್ರಥಮ ಸ್ಥಾನ ಪಡೆದವು.

ಮಹಿಳಾ ವಿಭಾಗದ ಗುಂಡು ಎಸೆತದಲ್ಲಿ ಅಂಕಿತಾ ಪ್ರಥಮ, ಹಗ್ಗದಾಟದಲ್ಲಿ ಮೌಲ್ಯ ಮತ್ತು ಮಹೇ ಜಬಿನ್ ಪ್ರಥಮ ಸ್ಥಾನ ಗಳಿಸಿದರು. ಕಬಡ್ಡಿಯಲ್ಲಿ ಎಂಡಿಆರ್‍ಎಸ್ ತಂಡ ಪ್ರಥಮ, ಕೊಕ್ಕೋದಲ್ಲಿ ಕಮಠಾಣ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ತಂಡ, ವಾಲಿಬಾಲ್‍ನಲ್ಲಿ ಎಂಡಿಆರ್‍ಎಸ್ ತಂಡ ಪ್ರಥಮ ಸ್ಥಾನ ಪಡೆದವು.

ಸಮಾರೋಪ ಸಮಾರಂಭದಲ್ಲಿ ವೈಯಕ್ತಿಕ ಹಾಗೂ ಗುಂಪು ವಿಭಾಗದ ಸ್ಪರ್ಧೆಗಳ ವಿಜೇತರಿಗೆ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಹಾಗೂ ಶಾಲೆಯ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ ಜಂಟಿಯಾಗಿ ಟ್ರೋಫಿ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಕೇದಾರನಾಥ ಪಾಟೀಲ, ಸಚಿನ್, ಇರ್ಫಾನ್, ಬಸವರಾಜ ಸುದರ್ಶನ್ ಇದ್ದರು.

ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮಹಿಳಾ ಠಾಣೆ ಸಿಪಿಐ ವಿಜಯಕುಮಾರ ಬಾವಗಿ, ಪಶು ವೈದ್ಯಕೀಯ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಶಿವಕುಮಾರ ಗಡ್ಡೆ, ಪದವಿಪೂರ್ವ ಶಿಕ್ಷಣ ಇಲಾಖೆಯ ದೈಹಿಕ ನಿರ್ದೇಶಕ ನಾಗನಾಥ ಬಿರಾದಾರ, ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ, ಅಂಬಾದಾಸ, ಸಂಜುಕುಮಾರ, ತುಕಾರಾಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT