ಬುಧವಾರ, ಅಕ್ಟೋಬರ್ 20, 2021
29 °C

ವಿಷ್ಣುವರ್ಧನ್ ಜನ್ಮದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಷ್ಣು ಸೇನಾ ಸಮಿತಿಯಿಂದ ನಗರದ ನೌಬಾದ್‍ನ ಜ್ಞಾನ ಶಿವಯೋಗ ಆಶ್ರಮದಲ್ಲಿ ನಟ ವಿಷ್ಣುವರ್ಧನ್ ಅವರ 71ನೇ ಜನ್ಮದಿನ ಆಚರಿಸಲಾಯಿತು.

ವಿಷ್ಣುವರ್ಧನ್ ಅವರು ಚಿತ್ರರಂಗದ ಜತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಿದ್ದರು. ಯುವಜನತೆಗೆ ಆದರ್ಶವಾಗಿದ್ದ ಅವರು, ನುಡಿದಂತೆ ನಡೆದಿದ್ದರು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ಅಭಿಪ್ರಾಯಪಟ್ಟರು.

ವಿಷ್ಣುವರ್ಧನ್ ಜೀವನ ಎಲ್ಲರಿಗೆ ಸ್ಫೂರ್ತಿಯಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ವೀರೇಶ ಸ್ವಾಮಿ ಹೇಳಿದರು.

ವಿಷ್ಣುವರ್ಧನ್ ಜೀವನ ಮತ್ತು ಸಾಧನೆ ಕುರಿತು ಯುವ ಮುಖಂಡ ಗುರುನಾಥ ರಾಜಗೀರಾ ಮಾತನಾಡಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವ ಮೂಲಗೆ, ಪದಾಧಿಕಾರಿಗಳಾದ ಪವನ್ ಮಡಿವಾಳ, ಸಿದ್ದು ಕಾಡೋದೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು