ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಜಯಂತಿ ಆಚರಣೆ

Last Updated 17 ಸೆಪ್ಟೆಂಬರ್ 2020, 15:52 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಸಂಸ್ಕೃತಿ ಹಾಗೂ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ’ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯ ಕನ್ನಡ ಉಪನ್ಯಾಸಕ ಈಶ್ವರಯ್ಯ ಕೊಡಂಬಲ್ ಹೇಳಿದರು.

ನಗರದ ಬ್ಯಾಂಕ್ ಕಾಲೊನಿ ಸಮೀಪದ ಸಂಕಲ್ಪ ಫೌಂಡೇಶನ್ ಸಭಾಂಗಣದಲ್ಲಿ ತಿಂಥಣಿ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ತಿಂಥಣಿ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿಯ ಅಧ್ಯಕ್ಷ ಸಚಿನ್ ವಿಶ್ವಕರ್ಮ ಮಾತನಾಡಿ, ‘ವಿಶ್ವಕರ್ಮ ಸಮುದಾಯ ಕಾರ್ಯದ ಬಗ್ಗೆ ಉಲ್ಲೇಖವಿಲ್ಲದೆ ಇತಿಹಾಸ ಹಾಗೂ ಪುರಾಣಗಳು ಮುಕ್ತಾಯವಾಗುವುದಿಲ್ಲ’ ಎಂದರು.

ಸಮಿತಿಯ ಪದಾಧಿಕಾರಿಗಳಾದ ಅರವಿಂದ ವಿಶ್ವಕರ್ಮ, ಕಾರ್ತಿಕ ವಿಶ್ವಕರ್ಮ, ವಿದ್ಯಾಸಾಗರ ವಿಶ್ವಕರ್ಮ, ಮಹೇಶ ವಿಶ್ವಕರ್ಮ, ರವಿಂದ್ರರೆಡ್ಡಿ, ವೀರೇಂದ್ರ ಪಾಟೀಲ ಇದ್ದರು.

ಸುನೀಲ ಮೂಲಗೆ ನಿರೂಪಿಸಿದರು. ವಿನೋದ ವಿಶ್ವಕರ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT