ಮತದಾನ ಕುರಿತು ಜಾಗೃತಿ ಜಾಥಾ

7

ಮತದಾನ ಕುರಿತು ಜಾಗೃತಿ ಜಾಥಾ

Published:
Updated:
Prajavani

ಹಟ್ಟಿ ಚಿನ್ನದ ಗಣಿ: ಹಟ್ಟಿಗೆ ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಟ್ಯಾಗೋರ್‌ ಮೆಮೋರಿಯಲ್‌ ಪ್ರೌಢ ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್‌ ಸದಸ್ಯರಿಂದ ಗ್ರಾಮದಲ್ಲಿ ಚುನಾವಣೆ ಕುರಿತು ಜಾಗೃತಿ ಮೂಡಿಸಲು ಶನಿವಾರ ಸೈಕಲ್‌ ಜಾಥಾ ನಡೆಸಲಾಯಿತು.

ಜಾಥಾದಲ್ಲಿ ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಬೇಕು, ದೇಶದ ಅಭಿವೃದ್ಧಿಗಾಗಿ ಮತದಾನ ಅವಶ್ಯ ಎಂದು ಘೋಷಣೆಗಳನ್ನು ಕೂಗಿಕೊಂಡು ಗ್ರಾಮ ಪಂಚಾಯಿತಿ ಕಚೇರಿವರೆಗೆ ಜಾಥಾ ನಡೆಸಿದರು.

ಮುಖ್ಯ ಶಿಕ್ಷಕ ಪ್ರೇಮಲತ ಸಿಂಧೆ, ಶಿಪುತ್ರಪ್ಪ ಬೀದರ್‌, ವೆಂಕಟೇಶ ಜೋಷಿ, ರಾಮಪ್ಪ ಮಾದರ, ಎನ್‌. ವೆಂಕಟೇಶ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !