ಕಾರಂಜಾ ನದಿ ಪಾತ್ರದ ಗೋಧಿಹಿಪ್ಪರಗಾ, ಚಂದಾಪೂರ, ಬಾಳೂರ, ದಾಡಗಿ, ಕುರುಬಖೇಳಗಿ, ಡಾವರಗಾಂವ, ಕಣಜಿ, ಜ್ಯಾಂತಿ, ನೇಳಗಿ ಗ್ರಾಮಗಳ ಹಲವಾರು ರೈತರ ಹೊಲಗಳಿಗೆ ನೀರು ನುಗ್ಗಿ ತೊಗರಿ, ಸೋಯಾ ಅವರೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಬೆಳೆ ಹಾನಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ಸರ್ಕಾರ ಪರಿಹಾರ ನೀಡಬೇಕು ಎಂದು ವಾಲ್ಮಿಕಿ ಸಮಾಜದ ಸಿದ್ದು ಜಮಾದಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.