ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಸಂಕಲ್ಪದೊಂದಿಗೆ ಹೊಸ ವರುಷಕ್ಕೆ ಸ್ವಾಗತಿಸೋಣ

ಅಕ್ಕ ಅನ್ನಪೂರ್ಣ ಲಿಂಗಾಯತ ಮಹಾಮಠ, ಬೀದರ್
Last Updated 31 ಡಿಸೆಂಬರ್ 2018, 14:50 IST
ಅಕ್ಷರ ಗಾತ್ರ

ಹೊಸ ವರುಷವೆಂಬುದು ಹಿಂದಿನ ದಿನಗಳ ಅವಲೋಕನ. ಮುಂದಿನ ಅವಕಾಶಗಳ ಸದುಪಯೋಗದ ಸತ್‌ಸಂಕಲ್ಪದ ನಿರ್ಣಯದ ಶುಭ ದಿನ. ವಿನೂತನ ಮಾದರಿಯಲ್ಲಿ ಸಂಸ್ಕೃತಿ ಭರಿತವಾಗಿ ಆಚರಿಸಿ ಸುಂದರ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆಯಿರಿಸುವುದು ಸೂಕ್ತ ಆಚರಣೆ.

ಸರ್ವ ರೀತಿಯಿಂದಲೂ ಈ ದೇಶ ಸ್ವಚ್ಛ ಭಾರತವಾಗಬೇಕಿದೆ. ಆ ಜವಾಬ್ದಾರಿ ಯುವ ಜನತೆಯ ಮೇಲಿದೆ. ಅಂತೆಯೇ ನಮ್ಮ ದೇಶದ ಯುವ ಸಮುದಾಯ 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿ ತೋರಿದ ‘ನೀಡುವವರುಂಟು ಬೇಡುವವರಿಲ್ಲ’ ಎನ್ನುವ ಸಮೃದ್ಧ, ಸಂತೃಪ್ತ ಕಲ್ಯಾಣ ರಾಜ್ಯ ನಿರ್ಮಾಣದ ಸಂಕಲ್ಪಗೈಯಬೇಕು. ಭಾರತ ಬದಲಾಗಬೇಕೆಂದು ಹೃದಯಪೂರ್ವಕವಾಗಿ ಪ್ರತಿಯೊಬ್ಬರು ಬಯಸಬೇಕು. ಇಂಥ ಬದಲಾವಣೆ ಇಂದೇ, ಇದೇ ಗಳಿಗೆಯಿಂದ ನನ್ನಿಂದಲೇ ಆರಂಭ ಎಂಬ ಛಲ ತೊಡಬೇಕು.

‘ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ, ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ, ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ, ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ’ ಎಂಬ ವಚನ ವಾಣಿಯಂತೆ ತಾನು ದುಡಿಯದೆ ಬಂದ ಪರಧನವನ್ನು ಮುಟ್ಟಲಾರೆ, ಪರಸ್ತ್ರೀಯನ್ನು ಹೆತ್ತ ತಾಯಿ ಸಮಾನವೆಂದು ಭಾವಿಸುವೆ, ಸಕಲ ಜೀವಾತ್ಮರಿಗೆ ಲೇಸನ್ನೇಬಯಸುವೆ, ನೋವು-ನಲಿವುಗಳನ್ನು ಪ್ರಸಾದವಾಗಿ ಸ್ವೀಕರಿಸುವೆ ಎನ್ನುವ ಛಲವನ್ನು ಧರಿಸಬೇಕು. ಎಂಥದ್ದೇ ಸ್ಥಿತಿಯಲ್ಲಿ ಸಮಚಿತ್ತತೆ ಕಾಯ್ದುಕೊಳ್ಳುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು.ತನ್ಮೂಲಕ ಸುಂದರ , ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT