ಬುಧವಾರ, ಸೆಪ್ಟೆಂಬರ್ 22, 2021
25 °C
ಎರಡನೇ ಬಾರಿ ಸಚಿವರಾದ ಬಳಿಕ ಜಿಲ್ಲೆಗೆ ಮೊದಲ ಭೇಟಿ

ಗಡಿಯಲ್ಲಿ ಸಚಿವ ‌ಪ್ರಭು ಚವಾಣ್‌ಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆಚ ಶುಕ್ರವಾರ ಜಿಲ್ಲೆಗೆ ಆಗಮಿಸಿದ ಸಚಿವ ಪ್ರಭು ಚವಾಣ್‌ ಅವರಿಗೆ ತಾಲ್ಲೂಕಿನ ಶಹಾಪುರ ಗೇಟ್‌ ಸಮೀಪ ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.

ಹೈದರಾಬಾದ್‌ ವಿಮಾನ ನಿಲ್ದಾಣದಿಂದ ಬೀದರ್‌ಗೆ ಬಂದ ಚವಾಣ್‌ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬಿಜೆಪಿ ಕಲಬುರ್ಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಬಸವಕಲ್ಯಾಣ ಶಾಸಕ ಶರಣು ಸಲಗರ ಮೊದಲಾದವರು ಪುಷ್ಪಗುಚ್ಛ ನೀಡಿ ಬರ ಮಾಡಿಕೊಂಡರು. ಬಳಿಕ ಕಾರ್ಯಕರ್ತರು ಸಚಿವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.

ಮುಖಂಡರಾದ ಡಿ.ಕೆ.ಸಿದ್ರಾಮ, ಅರಿಹಂತ ಸಾವಳೆ, ಶಿವರಾಜ್ ಗಂದಗೆ, ಹಣಮಂತ ಬುಳ್ಳಾ, ಚಂದ್ರಶೇಖರ ಪಾಟೀಲ, ಜಿಲ್ಲಾ ಪ್ರಬುದ್ಧರ ಪ್ರಕೋಷ್ಠದ ಸಂಚಾಲಕ ಬಸವರಾಜ ಪವಾರ, ಉಪೇಂದ್ರ ದೇಶಪಾಂಡೆ ಮೊದಲಾದವರು ಇದ್ದರು.

ಸ್ವಾಗತ ಕೋರಿದ ಡಿ.ಸಿ, ಎಸ್‌.ಪಿ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಸಚಿವರಿಗೆ ಹೂಗುಚ್ಛ‌ ನೀಡಿ ಸ್ವಾಗತ ಕೋರಿದರು.
ಬೀದರ್‌ ತಹಶೀಲ್ದಾರ್ ಶಕೀಲ್, ಪಶುಪಾಲನಾ ಇಲಾಖೆಯ ಅಧಿಕಾರಿ ಗೌತಮ ಅರಳಿ, ಸಿಪಿಐ ಫಾಲಾಕ್ಷಯ್ಯ ಹಿರೇಮಠ ಇದ್ದರು.
ನಂತರ ಸಚಿವರು ಪಕ್ಷದ ಕಾರ್ಯಾಲಯಕ್ಕೆ ತೆರಳಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಔರಾದ್‌ಗೆ ಪ್ರಯಾಣ ಬೆಳೆಸಿದರು.

ಜನವಾಡ ವರದಿ: ಬೀದರ್‌ ತಾಲ್ಲೂಕಿನ ಚಿಕ್ಕಪೇಟೆ ಹಾಗೂ ಮರಕಲ್ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಸ್ವಾಗತ ಕೋರಿದರು.
ಚಿಕ್ಕಪೇಟೆಯಿಂದ ಆರಂಭವಾದ ಬೈಕ್ ರ್‍ಯಾಲಿ ಮರಕಲ್, ಜನವಾಡ, ಕೌಠಾ ಮಾರ್ಗವಾಗಿ ಔರಾದ್ ತಾಲ್ಲೂಕಿನ ವಡಗಾಂವ್‌ ವರೆಗೆ ನಡೆಯಿತು.

ಕೌಠಾದಲ್ಲಿ ಗ್ರಾಮಸ್ಥರು ಸ್ವಾಗತ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗುಂಡಪ್ಪ ಬಿರಾದಾರ, ಗುಂಡಪ್ಪ ಮೇಳೆ, ಬಸವರಾಜ ಸೆಳಕೆ, ಗುರುನಾಥ ಗಾದಗೆ, ಚನ್ನಬಸಪ್ಪ ಬಿರಾದಾರ, ಲೋಕೇಶ ಬಿರಾದಾರ, ರವೀಂದ್ರ ಪಾಟೀಲ, ಶಿವಕುಮಾರ ಜೀರಗೆ, ಮಹಾದೇವ ತರನಾಳೆ ಕೌಡಗಾಂವ್, ವಿಜಯಕುಮಾರ ಮೈನಾಳೆ, ಶ್ರೀಮಂತ ಪಾಟೀಲ ಹೆಡಗಾಪುರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.