ಆಪರೇಷನ್‌ ಕಮಲ ಮಾಡಿದಾಗ ಚೌಕೀದಾರರು ಎಲ್ಲಿದ್ದರು?: ಈಶ್ವರ ಖಂಡ್ರೆ ಪ್ರಶ್ನೆ

ಶುಕ್ರವಾರ, ಏಪ್ರಿಲ್ 19, 2019
27 °C

ಆಪರೇಷನ್‌ ಕಮಲ ಮಾಡಿದಾಗ ಚೌಕೀದಾರರು ಎಲ್ಲಿದ್ದರು?: ಈಶ್ವರ ಖಂಡ್ರೆ ಪ್ರಶ್ನೆ

Published:
Updated:
Prajavani

ಬೀದರ್‌: ‘ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಆಪರೇಷನ್‌ ಕಮಲ ಮಾಡಿದಾಗ ಚೌಕೀದಾರರು ಎಲ್ಲಿದ್ದರು’ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದರು.

‘ಆಪರೇಷನ್‌ ಕಮಲ ಒಂದು ಶಾಪ. ಆದರೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

‘ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹಣ ಕೊಟ್ಟು ಶಾಸಕರನ್ನು ಖರೀದಿಸುವುದು, ಐಟಿ ದಾಳಿಯ ಬೆದರಿಕೆ ಹಾಕುವುದನ್ನು ಮಾಡಿದೆ. ಪ್ರತಿಪಕ್ಷದಲ್ಲಿ ಇದ್ದುಕೊಂಡು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕಿದ್ದ ಬಿಜೆಪಿ ಎಲ್ಲರಿಗೂ ಅವಮಾನವಾಗುವ ರೀತಿಯಲ್ಲಿ ಆಪರೇಷನ್‌ ಕಮಲ ಮಾಡಿದೆ. ಜನರು ರಾಜಕಾರಣಿಗಳನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಪರೇಷನ್‌ ಕಮಲದಿಂದಾಗಿ ಏನು ಕೊಟ್ಟರೋ, ಏನು ತೆಗೆದುಕೊಂಡರೋ, ಏನು ಲೂಟಿ ಮಾಡಿದರೋ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಆಪರೇಷನ್‌ ಕಮಲ ಮಾಡಿದವರಿಗೆ ಚೌಕೀದಾರರು ಬುದ್ದಿ ಏಕೆ ಹೇಳಲಿಲ್ಲ‘ ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಇದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !