ಬೀದರ್: ನಗರದ ತೋಟಗಾರಿಕೆ ಕಾಲೇಜಿನಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

‘ಅಕ್ಕ ಪಡೆ’ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ಉದ್ಘಾಟಿಸಿ, ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ ಮತ್ತು ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಹೇಳಿದರು.

ಮಹಿಳೆಯರ ಮೇಲಿನ ಹಿಂಸೆ, ತಾರತಮ್ಯ ಮತ್ತು ಭೇದಭಾವವನ್ನು ತೊಡೆದುಹಾಕಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾಲೇಜಿನ ಡೀನ್ ಎಸ್. ವಿ. ಪಾಟೀಲ ಮಾತನಾಡಿ, ಕುಟುಂಬದ ಬೆಳವಣಿಗೆ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾದುದು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಪಿ ಪ್ರದಾನ ಮಾಡಲಾಯಿತು. 100 ಮೀ. ಓಟದಲ್ಲಿ ಸುಷ್ಮಾ ಪ್ರಥಮ, ಗುಂಡು ಎಸೆತದಲ್ಲಿ ಸುಶ್ಮಿತಾ ಅಂಬಿಗೇರ ಪ್ರಥಮ ಬಹುಮಾನ ಪಡೆದರು.

ಸಹಾಯಕ ಪ್ರಾಧ್ಯಾಪಕ ರಮೇಶ ನಾಯಕ ಕ್ರೀಡಾ ವರದಿ ವಾಚಿಸಿದರು. ಸಹಾಯಕ ಪ್ರಾಧ್ಯಾಪಕ ವಿಜಯ ಮಾಹಾಂತೇಶ, ಬೋಧಕೇತರ ಸಿಬ್ಬಂದಿ ಶ್ರೀನಿವಾಸ ಎನ್., ಅಂಬ್ರೇಶ, ಕಡ್ಲಿ ವೀರೇಶ, ರಾಜಕುಮಾರ್ ಐ., ಕಾವೇರಿ ಅವಸಂಗರದ, ಕಿರಣ್ ರಾಠೋಡ್, ಸುನೀತಾ ಎಮ್. ಕೆ., ವಿಶಾಲ ಎನ್., ಶಾರದಾ ಮುಲಗಿ ಹಾಜರಿದ್ದರು. ಕವಿತಾ ರಾಠೋಡ್ ಸ್ವಾಗತಿಸಿದರೆ, ಅನುರಾಧಾ ವಡಗಾವೆ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಜಾಹ್ನವಿ ಡಿ.ಆರ್. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.