‘ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ’

7
ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಹೇಳಿಕೆ

‘ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ’

Published:
Updated:
Deccan Herald

ಬೀದರ್‌: ‘ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು’ ಎಂದು ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಜಿಲ್ಲಾ ಆಡಳಿತ ಹಾಗೂ ಸ್ವೀಪ್ ಸಮಿತಿಯಿಂದ ಬೀದರ್‌ ದಕ್ಷಿಣ, ಬೀದರ್‌ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ಮತದಾರರ ನೋಂದಣಿ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮತದಾರರ ನೋಂದಣಿ ಅಭಿಯಾನಕ್ಕೆ ಅಧಿಕಾರಿಗಳ ಸಹಕಾರ ಅಗತ್ಯ. ನ. 29ರವರೆಗೆ ಕಾರ್ಯ ನಿರ್ವ ಹಿಸಿ ಮತದಾರ ಪಟ್ಟಿಯಲ್ಲಿ ಹೊಸ ಮತ ದಾರರ ಹೆಸರು ಸೇರಿಸಬೇಕು. ಹಳೆಯ ಮತದಾರರ ಹೆಸರು ಇರುವು ದನ್ನು ಖಚಿತಪಡಿಸಿಕೊಳ್ಳಬೇಕು’ ಎಂದರು.

ಚುನಾವಣಾ ಮಾಸ್ಟರ್‌ ಟ್ರೇನರ್ ಗೌತಮ ಅರಳಿ ಮಾತನಾಡಿ, ‘ಮತ ಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಬಿಎಲ್‌ಒ ದಿನಚರಿ ಬರೆಯಬೇಕು. ಪ್ರತಿ ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಯಾರ ಹೆಸರಿದೆ, ಯಾರ ಹೆಸರಿಲ್ಲ ಎನ್ನುವು ದನ್ನು ಪರಿಶೀಲಿಸಬೇಕು. ಹೆಸರು ಬಿಟ್ಟು ಹೋಗಿದ್ದರೆ ನೋಂದಣಿ ಮಾಡಿಸ ಬೇಕು’ ಎಂದು ತಿಳಿಸಿದರು.

‘ನಿಧನರಾಗಿದ್ದರೆ ಅಥವಾ ಬೇರೆಡೆ ಹೋಗಿದ್ದರೆ ಅವರ ಹೆಸರು ಪರಿಶೀಲಿಸಿ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ತೆಗೆಯಲು ಕ್ರಮವಹಿಸಬೇಕು. ಅಂಗವಿಕಲರು ಮತದಾರರ ಪಟ್ಟಿ ಯಿಂದ ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
‘ಪ್ರತಿಯೊಂದು ಹೋಬಳಿಯಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರನ್ನು ಈ ಕಾರ್ಯದಲ್ಲಿ ತೊಡಗಿಸ ಲಾಗುವುದು’ ಎಂದು ಮಾಹಿತಿ ನೀಡಿದರು. ತಹಶೀಲ್ದಾರ್‌ ಕೀರ್ತಿ ಚಾಲಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !