ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದಿಂದ ನೆಮ್ಮದಿ: ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅಭಿಮತ

Last Updated 8 ಫೆಬ್ರುವರಿ 2020, 9:52 IST
ಅಕ್ಷರ ಗಾತ್ರ

ಬೀದರ್: ‘ಇಷ್ಟಲಿಂಗ ಯೋಗದಿಂದ ಜೀವನದ ಒತ್ತಡ ನಿವಾರಣೆಯಾಗಿ ನೆಮ್ಮದಿ ಪ್ರಾಪ್ತಿಯಾಗುವುದು. ಇಷ್ಟಲಿಂಗ ಯೋಗ ಪಂಚ ಯೋಗಗಳ ಸಂಗಮವಾಗಿದೆ’ ಎಂದು ಲಿಂಗಾಯತ ಮಹಾಮಠದ ಅಕ್ಕಅನ್ನಪೂರ್ಣ ಅಭಿಪ್ರಾಯ ಪಟ್ಟರು.

ಇಲ್ಲಿಯ ಬಸವಗಿರಿಯ ಆವರಣದಲ್ಲಿ ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಆರಂಭವಾದ 17ನೇ ವಚನ ವಿಜಯೋತ್ಸವದ ಸಾಮೂಹಿಕ ಇಷ್ಟಲಿಂಗ ಯೋಗದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರಸ್ತುತ ದಿನದಲ್ಲಿ ಜನರಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗಿದೆ. ಇದರಿಂದ ಮನಸ್ಸು ಕಲುಷಿತಗೊಂಡಿವೆ. ಈ ಮನಸ್ಸುಗಳ ಶುದ್ಧೀಕರಣ ಹಾಗೂ ಭಾವಶುದ್ಧಿಗೆ ಸಾಮೂಹಿಕ ಇಷ್ಟಲಿಂಗ ಯೋಗ ಅವಶ್ಯಕ’ ಎಂದು ತಿಳಿಸಿದರು.

‘ಬಸವಣ್ಣನವರು ಜಾತಿ, ಮತ, ಭೇದವೆನ್ನದೆ ಎಲ್ಲರೂ ಲಿಂಗ ಧರಿಸಿ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಇಷ್ಟಲಿಂಗ ಯೋಗದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾರಿದರು’ ಎಂದರು.

ಸಿಂಧನೂರಿನ ಪಿ.ರುದ್ರಪ್ಪ ಕುರಕುಂದಾ ಮಾತನಾಡಿ,‘ ಬಸವ ತತ್ವವನ್ನು ಅಪ್ಪಿಕೊಂಡರೆ ಜೀವನ ಸಾರ್ಥಕವಾಗುವುದು. ಬಸವಣ್ಣನವರ ತತ್ವಗಳು ವಿಶ್ವದ ಎಲ್ಲ ಜನರ ಅಭಿವೃದ್ಧಿಗೆ ಪೂರಕವಾಗಿವೆ’ ಎಂದರು.

ಅಕ್ಕ ಗಂಗಾಂಬಿಕೆ, ಅಕ್ಕಲಕೋಟ್‌ದ ಹಿರೇಮಠ ಬಸವ ಮಂಟಪದ ಮಹಾನಂದಾ ತಾಯಿ ನೇತೃತ್ವ ವಹಿಸಿದ್ದರು. ರಮೇಶ ಮಠಪತಿ ಪ್ರಾಣ ಲಿಂಗಾರ್ಚನೆಯನ್ನು ಹೇಳಿಕೊಟ್ಟರು.

ಹುಮನಾಬಾದ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಚೆನ್ನಬಸಪ್ಪ ವಡ್ಡನಕೇರಾ ಅಧ್ಯಕ್ಷತೆ ವಹಿಸಿದ್ದರು. ವಚನ ವಿಜಯೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ರಾಜಶೇಖರ ಮಠ, ಅವಿನಾಶ ಅರಳಗುಂಡಗಿ, ಶಶಿಧರ ಪಾಟೀಲ, ಚೆನ್ನಪ್ಪ ನರಸಣ್ಣವರು, ವಿಜಯಲಕ್ಷ್ಮಿ ಪಾಟೀಲ, ವೈಜಿನಾಥ ಕುಂಬಾರ, ಭದ್ರಪ್ಪ ಮಿರಕಲೆ, ಕಂಟೆಪ್ಪ ಗಂದಿಗುಡೆ, ಅಶೋಕ ಗಂದಿಗುಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT