ಮೋದಿ ಬೆಂಬಲಿಸಿ ‘ಕಮಲ ಕಪ್’ ಕ್ರಿಕೆಟ್

ಭಾನುವಾರ, ಏಪ್ರಿಲ್ 21, 2019
26 °C

ಮೋದಿ ಬೆಂಬಲಿಸಿ ‘ಕಮಲ ಕಪ್’ ಕ್ರಿಕೆಟ್

Published:
Updated:

ಶಿವಮೊಗ್ಗ: ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾರ್ಚ್‌ 4 ಮತ್ತು 5ರಂದು ಎನ್ಇಎಸ್ ಮೈದಾನದಲ್ಲಿ ‘ಮೋದಿ ವಿಜಯ್ ಲಕ್ಷ್ಯ -ಕಮಲ ಕಪ್' ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಆಯೋಜಿಸಲಾಗಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಯುವ ಮೋರ್ಚಾ ಆಶಯ. ಅದರ ಅಂಗವಾಗಿ ಈ ಹೊನಲು ಬೆಳಕಿನ ಕ್ರಿಕೆಟ್ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹೃಷಿಕೇಷ್‌ ಪೈ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಗಾಗಲೇ 5 ಕಡೆ ಪಂದ್ಯ ಆಯೋಜಿಸಲಾಗಿದೆ. 4 ಮತ್ತು 5ರಂದು ನಡೆಯುವ ಪಂದ್ಯದಲ್ಲಿ 16 ತಂಡಗಳು ಭಾಗವಹಿಸಲಿವೆ. ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ನಡೆಯಲಿದೆ. 4ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ಇರುತ್ತದೆ. 5ರಂದು ಸಂಜೆ 5ಕ್ಕೆ ಸಮಾರೋಪ. ಪ್ರಥಮ ಬಹುಮಾನ ₨ 1 ಲಕ್ಷ, ದ್ವಿತೀಯ ಬಹುಮಾನ ₨ 50 ಸಾವಿರ ಒಳಗೊಂಡಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭವಾನಿರಾವ್ ಮೋರೆ, ವಿನಾಯಕ್, ಸಿ.ಎಚ್. ಮಾಲತೇಶ್, ಕಾಂತೇಶ್, ರಾಘವೇಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !