ಬಿಜೆಪಿ ಟಿಕೆಟ್‌ ಬಯಸಿ 326 ಅರ್ಜಿಗಳು!

7
ಇಂದು ಎಲ್ಲ 35 ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಸ್‌. ರುದ್ರೇಗೌಡ್ರು

ಬಿಜೆಪಿ ಟಿಕೆಟ್‌ ಬಯಸಿ 326 ಅರ್ಜಿಗಳು!

Published:
Updated:
Deccan Herald

ಶಿವಮೊಗ್ಗ: ನಗರ ಪಾಲಿಕೆಯ 35 ವಾರ್ಡ್‌ಗಳಿಂದ ಸ್ಪರ್ಧೆ ಬಯಸಿ ಒಟ್ಟು 326 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಶಾಸಕ ಕೆ.ಎಸ್. ಈಶ್ವರಪ್ಪ ಅವರ ಜತೆ ಚರ್ಚಿಸಿ, ಆ. 14ರಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ರುದ್ರೇಗೌಡ್ರು ತಿಳಿಸಿದರು.

25ನೇ ವಾರ್ಡ್‌ನಿಂದ ಸ್ಪರ್ಧೆ ಬಯಸಿ ಅತಿ ಕಡಿಮೆ ಅಂದರೆ, 2 ಅರ್ಜಿಗಳು, ಗಾಂಧಿ ನಗರದಿಂದ ಸ್ಪರ್ಧೆ ಬಯಸಿ ಅತಿ ಹೆಚ್ಚು ಅಂದರೆ 21 ಅರ್ಜಿಗಳು ಬಂದಿವೆ. ನಗರದ ಪ್ರಮುಖರು, ಶಾಸಕರು ಸೇರಿ ಎಲ್ಲ 326 ಅರ್ಜಿಗಳನ್ನು ಪರಿಶೀಲಿಸಿದ್ದಾರೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಈ ಬಾರಿ ಹೊಸ ಮುಖಗಳ ಜತೆಗೆ, ಹಳಬರು ಹಾಗೂ ಮಹಿಳೆಯರಿಗೆ ಅದ್ಯತೆ ನೀಡಲಾಗಿದೆ. ಉತರೆ ಪಕ್ಷಗಳಿಂದ ಬಂದವರು ಕೂಡ ಟಿಕೆಟ್ ಬಯಸಿದ್ದಾರೆ. ಆದರೆ, ಮೊದಲು ಮೂಲ ಬಿಜೆಪಿಗರಿಗೆ ಆದ್ಯತೆ ನೀಡಲಾಗುವುದು. ಒಟ್ಟಾರೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಆಡಳಿತ ಚುಕ್ಕಾಣಿ ಹಿಡಿಯುತ್ತದೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್. ಈಶ್ವರಪ್ಪ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಇದು ಪಕ್ಷಕ್ಕೆ ಅನುಕೂಲಕರವಾದ ವಾತಾವರಣ ಮೂಡಿಸಿದೆ. ಪಾಲಿಕೆ ಅಧಿಕಾರ ಹಿಡಿದು ನಗರದ ಹಲವು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು. ಸ್ಮಾರ್ಟ್‌ಸಿಟಿ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಬಿಳಕಿ ಕೃಷ್ಣಮೂರ್ತಿ, ಮಧುಸೂದನ್, ಹಿರಣ್ಣಯ್ಯ, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !