ಅತಿವೃಷ್ಟಿ: ಕುಟುಂಬಗಳ ನೆರವಿಗೆ ಬಿಎಲ್‌ಡಿಇಯಿಂದ ₹ 15 ಲಕ್ಷ ದೇಣಿಗೆ

7

ಅತಿವೃಷ್ಟಿ: ಕುಟುಂಬಗಳ ನೆರವಿಗೆ ಬಿಎಲ್‌ಡಿಇಯಿಂದ ₹ 15 ಲಕ್ಷ ದೇಣಿಗೆ

Published:
Updated:
Deccan Herald

ವಿಜಯಪುರ: ಅತಿವೃಷ್ಟಿಗೆ ಸಿಲುಕಿ ನಲುಗುತ್ತಿರುವ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಲ್‌ಡಿಇ ಸಂಸ್ಥೆ ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 15 ಲಕ್ಷ ಮೊತ್ತದ ಚೆಕ್‌ ನೀಡಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಜಿ.ಕೆ.ಪಾಟೀಲ ಜಿಲ್ಲಾಧಿಕಾರಿಗೆ ಚೆಕ್‌ ಹಸ್ತಾಂತರಿಸಿದರು.

ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ ಸಂಸ್ಥೆಯಿಂದ ₹ 5 ಲಕ್ಷ ನೆರವು ಘೋಷಿಸಿದ್ದರು. ಸಂಸ್ಥೆಯ ಸಿಬ್ಬಂದಿ ತಮ್ಮ ಒಂದು ದಿನದ ವೇತನ ₹ 10 ಲಕ್ಷ ಮೊತ್ತವನ್ನು ದೇಣಿಗೆಯಾಗಿ ನೀಡಿದರು. ಈ ಎರಡೂ ಮೊತ್ತವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದು ಜಿ.ಕೆ.ಪಾಟೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !