ಹೊಸತು ಸೃಷ್ಟಿಸುವ ಕವಿ ವಿಭಿನ್ನ: ವಿಜಯಾ ಶ್ರೀಧರ್

ಭಾನುವಾರ, ಜೂಲೈ 21, 2019
25 °C

ಹೊಸತು ಸೃಷ್ಟಿಸುವ ಕವಿ ವಿಭಿನ್ನ: ವಿಜಯಾ ಶ್ರೀಧರ್

Published:
Updated:
Prajavani

ಶಿವಮೊಗ್ಗ: ಹೊಸದು ಸೃಷ್ಟಿಸುವ ಹಂಬಲವಿರುವ ಕವಿಗಳು ರಚಿಸುವ ಕವಿತೆಗಳು ಸದಾ ವಿಭಿನ್ನವಾಗಿರುತ್ತವೆ ಎಂದು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಅಭಿಪ್ರಾಯಪಟ್ಟರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈದ್ಯ ಸಿ.ಜಿ.ರಾಘವೇಂದ್ರ ಅವರ ಚೊಚ್ಚಲ ಕವನ ಸಂಕಲನ ‘ಭಾವಯಾನ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಎಲ್ಲದಕ್ಕಿಂತಲೂ ವೇಗವಾಗಿ ಸಂಚರಿಸುವುದು ಮನಸ್ಸು. ಮಹಾಭಾರತದ ಯಕ್ಷಪ್ರಶ್ನೆಗಳಿಗೆ ಅಂದೇ ಯುಧಿಷ್ಠರ ಉತ್ತರ ನೀಡಿದ್ದಾರೆ. ಇಂದು ರಾಕೇಟ್‌ ಸೇರಿ ವೇಗದ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದರೂ, ಮನಸ್ಸಿನ ವೇಗಕ್ಕೆ ಅವು ಸಾಟಿಯಾಗುವುದೇ ಇಲ್ಲ. ರಾಘವೇಂದ್ರ ಅವರ ಕವನಗಳಲ್ಲೂ ಮನಸ್ಸಿನ ಹರಿದಾಟ ನಿರಂತರವಾಗಿದೆ. ಬುದ್ಧ, ಬಸವ, ಗಾಂಧಿ ಅವರ ಆದರ್ಶದ ಜತೆ, ಮೋದಿ, ದೇಶ ಭಕ್ತಿಯೂ ಮೂಡಿದೆ. ಬಹುತೇಕ ಕವನಗಳು ಹೊಸತನದಿಂದ ಕೂಡಿವೆ ಎಂದು ಬಣ್ಣಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಸುಬ್ಬಯ್ಯ ಆಸ್ಪತ್ರೆಯ ಡಾ.ವಿನಯಾ ಶ್ರೀನಿವಾಸ್, ಕವನಗಳು ಬದುಕಿನ ಮೌಲ್ಯಗಳನ ್ನು ಒಳಗೊಂಡಿವೆ. ಭಾಷಾ ಪ್ರೌಢಿಮೆ, ಸೃಜನಶೀಲತೆ ಕಾಣಬಹುದು ಎಂದರು.

ಸಾಹಿತಿ ಡಾ.ಕಿರಣ್ ದೇಸಾಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಲೇಖಕ ಡಾ.ರಾಘವೇಂದ್ರ ಮೈಲಾಯ, ಡಾ.ಶುಭಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !