ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪರ ಧ್ವನಿಯೇ ಸಮಾಜಮುಖಿ: ಸದಾನಂದ

Last Updated 31 ಜನವರಿ 2020, 14:16 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಿಳಾಪರ ಧ್ವನಿ ಎತ್ತುವುದೇ ಸಮಾಜಮುಖಿ ನಡೆಎಂದು ಕುವೆಂಪು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಜೆ.ಎಸ್.ಸದಾನಂದಪ್ರತಿಪಾದಿಸಿದರು.

ಕಮಲಾ ನೆಹರೂ ಸ್ಮಾರಕ ಮಹಿಳಾ ಕಾಲೇಜಿನಲ್ಲಿಶುಕ್ರವಾರ ರಾಜ್ಯ ಶಾಸ್ತ್ರ ವಿಭಾಗ, ಶಿಕಾರಿಪುರದಸುವ್ವಿ ಪಬ್ಲಿಕೇಷನ್ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಎಸ್.ಟಿ.ಪವಿತ್ರಾಅವರಕೃತಿ‘ಸಮಕಾಲೀನ ಮಹಿಳೆಯರ ಸವಾಲುಗಳು’ ಬಿಡುಗಡೆಮಾಡಿ ಅವರು ಮಾತನಾಡಿದರು.

ಮಹಿಳಾ ವಾದ ಪ್ರತ್ಯೇಕ ಶಿಸ್ತಾಗಿ ಬೆಳೆಯುತ್ತಿದೆ.ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಕ್ಷಮತೆಇದೆ. ಕ್ಷೀಪ್ರವಾಗಿ ಬೆಳಯುತ್ತಿರುವ ಜಗತ್ತಿನಲ್ಲಿ ಪೈಪೋಟಿ ನೀಡಬೇಕಾದರೆ ಮಹಿಳೆಯರು ತಮ್ಮ ಬಗ್ಗೆಮೊದಲುತಿಳಿದುಕೊಳ್ಳಬೇಕು.ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಮಹಿಳೆಯರಿಗೆ ಸರ್ಕಾರ ಶೇ 50ರಷ್ಟು ಮೀಸಲಾತಿ ನೀಡಬೇಕು ಎಂದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಕುಲಸಚಿವ ಡಾ.ಸಾಲಿ ನಾರಾಯಣಪ್ಪ‘ಮಹಿಳಾ ಸಬಲೀಕರಣ’ ಕೃತಿ ಬಿಡುಗಡೆಮಾಡಿದರು.

ಎನ್‌ಇಎಸ್ ಅಧ್ಯಕ್ಷಎ.ಎಸ್.ವಿಶ್ವನಾಥ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವ ಪ್ರೊ ಟಿ.ಎಸ್.ಹೂವಯ್ಯ ಗೌಡ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶೇಖರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಓಂಕಾರಪ್ಪ, ಪ್ರಾಂಶುಪಾಲರಾದ ಡಾ.ಕೆ.ಟಿ.ಪಾರ್ವತಮ್ಮ, ಲೇಖಕಿ ಎಸ್‌.ಟಿ.ಪವಿತ್ರಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT