ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ ಮಾದರಿ ತಾಲ್ಲೂಕಿಗೆ ಕ್ರಮ

ನಾಡಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸದಲ್ಲಿ ಸಚಿವ ದೇಶಪಾಂಡೆ ಭರವಸೆ
Last Updated 27 ಮಾರ್ಚ್ 2018, 9:52 IST
ಅಕ್ಷರ ಗಾತ್ರ

ದಾಂಡೇಲಿ: ನೂತನವಾಗಿ ರಚನೆಯಾದ ದಾಂಡೇಲಿ ತಾಲ್ಲೂಕು ಅನ್ನು ಮಾದರಿ ತಾಲ್ಲೂಕನ್ನಾಗಿಸುವುದೇ ಮೊದಲ ಗುರಿಯಾಗಿದ್ದು, ಆ ದಿಸೆಯಲ್ಲಿ ಎಲ್ಲ ಮೂಲಸೌಕರ್ಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಡು ಜಲಸಾರಿಗೆ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಸೋಮಾನಿ ವೃತದಲ್ಲಿ ನಿರ್ಮಾಣವಾಗಲಿರುವ ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆಯಡಿ ಯಲ್ಲಿ ₹ 35 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈಗಾ ಗಲೆ ತಲಾ ₹ 3 ಕೋಟಿ ವೆಚ್ಚದಲ್ಲಿ ಕಾಳಿ ರಿವರ್ ಪಾರ್ಕ್ ಮತ್ತು ಮೊಸಳೆ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೇವೆ ಎಂದರು.

ಟ್ರಕ್ ಟರ್ಮಿನಲ್ ನಿರ್ಮಾಣ ಕಾರ್ಯ, ಜೊಯಿಡಾ ತಾಲ್ಲೂಕಿಗೆ ಅಗತ್ಯವಾಗಿ ಬೇಕಾದ ರಸ್ತೆ, ಕುಡಿವ ನೀರು, ಸೇತುವೆ, ಬೀದಿ ದೀಪ ಹೀಗೆ ಇನ್ನೂ ಅನೇಕ  ಸೌಲಭ್ಯ ಒದಗಿ ಸಿಕೊಡಲಾಗಿದೆ. ಕೆನೊಪಿ ವಾಕ್ ಎಂಬ ರಾಷ್ಟ್ರದಲ್ಲೆ ಮೊದಲ ಯೋಜನೆ ಕಾರ್ಯಗತಗೊಳಿಸಿದ ಹೆಮ್ಮೆ ಇದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾತನಾಡಿದರು. ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ತಂಗಳ,  ಪೌರಾಯುಕ್ತ ರೋನಾಲ್ಡ್ ಜತ್ತಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮಾ ಬೇಪಾರಿ, ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ, ಜಂಗಲ್ ಲಾಡ್ಜಸ್ ನಿರ್ದೇಶಕ ಕರೀಂ ಅಜ್ರೇಕರ,ಅಬ್ದುಲ್ ವಹಾಬ್, ಯಾಸ್ಮಿನ್ ಕಿತ್ತೂರು, ಅಷ್ಫಾಕ್ ಶೇಖ, ಕೀರ್ತಿ ಗಾಂವಕರ, ಮಾರುತಿ ನಾಯ್ಕ, ರೈಸಾ ಬಿಡಿಕರ ಇದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೀದಿ ಬದಿ ವ್ಯಾಪಾರಸ್ಥ ಮಹಿಳೆಯರಿಗೆ ₹ 10 ಸಾವಿರ ನೆರವಿನ ಮಂಜೂರಾತಿ ಪತ್ರ, ಸ್ಥಳೀಯ ಕೋಗಿಲೆಬನ, ಬಡಕಾನಶಿರಡಾ, ಯಡೋಗಾ, ಆಲೂರು ಮೊದಲಾದ ಗ್ರಾಮಗಳ ಫಲಾನುಭವಿಗಳಿಗೆ ಪಹಣಿ ಪತ್ರಿಕೆ ಮತ್ತು ಅಕ್ರಮ, ಸಕ್ರಮ ಅದೇಶ ಪ್ರತಿ ಹಾಗೂ ಹೋಂ ಸ್ಟೇ ಗಳಿಗೆ ಅನುಮೋದನಾ ಪ್ರಮಾಣ ಪತ್ರಗಳನ್ನು ಸಚಿವ ದೇಶಪಾಂಡೆ ವಿತರಿಸಿದರು.

ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT