ಗುರುವಾರ , ನವೆಂಬರ್ 14, 2019
18 °C

ಕುಡಿತದ ಮತ್ತಿನಲ್ಲಿ ಕಾರು ಅಡ್ಡಾದಿಡ್ಡಿ ಚಾಲನೆ: ಮಹಿಳೆ ಸಾವು

Published:
Updated:

ಹೊಸನಗರ: ಕುಡಿತದ ಮತ್ತಿನಲ್ಲಿ ಚಾಲಕ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಡಿಕ್ಕಿ ಹೊಡೆದ ಕಾರಣ ಪಾದಚಾರಿ ಮಹಿಳೆ ಮೃತಪಟ್ಟಿದ್ದಾರೆ.

ಬಟ್ಟೆಮಲ್ಲಪ್ಪದ ಸ್ನೇಹ ಹೋಟೆಲ್‌ ಮಾಲೀಕ ಪ್ರಭಾಕರ ಅವರ ಪತ್ನಿ ಭಾರತಿ (38) ಮೃತಪಟ್ಟವರು. ಸತೀಶ್‌ ಎಂಬಾತ ಗಣೇಶ್‌ ಮತ್ತು ಇತರರೊಂದಿಗೆ ಮಾರುತಿಪುರದಿಂದ ಬರುವಾಗ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದಿದ್ದಾನೆ. ಕೇಶವಪುರ ಬಳಿ ದಾರಿಹೋಕರೊಬ್ಬರಿಗೆ ಡಿಕ್ಕಿಯಾಗಿ ಮುಂದಕ್ಕೆ ಬಂದಿತ್ತು. ಹಾಲು ಒಯ್ಯುತ್ತಿದ್ದ ಭಾರತಿ ಅವರಿಗೆ ಡಿಕ್ಕಿಯಾಗಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಲ್ಲಿಂದ ಮುಂದೆ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮುಂದೆ ಹರತಾಳು ರಸ್ತೆಯಲ್ಲಿ ಸಾಗಿ ಮೋರಿಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಹೊಸನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭಾರತಿ ಅವರಿಗೆ ಐದು ವರ್ಷದ ಮಗಳಿದ್ದು, ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂದು ಅವರ ಮನೆಯವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)