ಬೋನಿಗೆ ಬಿದ್ದ ಚಿರತೆ

7

ಬೋನಿಗೆ ಬಿದ್ದ ಚಿರತೆ

Published:
Updated:
Deccan Herald

ಕುದೂರು(ಮಾಗಡಿ): ಹೋಬಳಿಯ ಕೋಡಿಹಳ್ಳಿ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ 10 ವರ್ಷದ ಗಂಡು ಚಿರತೆ ಬಿದ್ದಿದೆ.

ಬಿಸ್ಕೂರು, ಮುತ್ತಸಾಗರ, ಮರೂರು, ಕೋಡಿಹಳ್ಳಿ ಸುತ್ತಲಿನ ಗ್ರಾಮಗಳ ರೈತರಿಗೆ ಕಂಟಕವಾಗಿದ್ದ ಚಿರತೆಯನ್ನು ಬಂಧಿಸುವಂತೆ ಸಾರ್ವಜನಿಕರು ಶಾಸಕ ಎ.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದ್ದರು. ಶುಕ್ರವಾರ ವಲಯ ಅರಣ್ಯ ಅಧಿಕಾರಿ ತಿಮ್ಮರಾಯಪ್ಪ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ಯು.ವಿ. ವರದರಾಜು ಗ್ರಾಮದ ಖಾಸಗಿ ನೀಲಗಿರಿ ನಡುತೋಪಿನಲ್ಲಿ ಬೋನು ಇಟ್ಟು, ಅದರೊಳಗೆ ನಾಯಿ ಮರಿಯನ್ನು ಕಟ್ಟಿದ್ದರು.

ಭಾನುವಾರ ರಾತ್ರಿ ನಾಯಿಯನ್ನು ತಿನ್ನುವ ಆಸೆಯಿಂದ ಬಂದ ಚಿರತೆ ಬೋನಿಗೆ ಬಿದ್ದಿದೆ. ಸೋಮವಾರ ಮುಂಜಾನೆ ಸ್ಥಳೀಯರು ವಿಷಯ ತಿಳಿಸಿದ ಕೂಡಲೇ ಭೇಟಿ ನೀಡಿದ್ದು, ಅರಣ್ಯ ರಕ್ಷಕರ ಸಹಕಾರದೊಂದಿಗೆ ಟೆಂಪೊದಲ್ಲಿ ಅದನ್ನು ಮೇಕೆದಾಟು ಅರಣ್ಯ ಪ್ರದೇಶದೊಳಗೆ ಬಿಡುವುದಾಗಿ ಎಂದು ಉಪವಲಯ ಅರಣ್ಯ ಅಧಿಕಾರಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !