ಮ್ಯಾಥ್ಯೂ ಸುರಾನಿಗೆ ಸಿಜಿಕೆ ರಂಗ ಪುರಸ್ಕಾರ

7

ಮ್ಯಾಥ್ಯೂ ಸುರಾನಿಗೆ ಸಿಜಿಕೆ ರಂಗ ಪುರಸ್ಕಾರ

Published:
Updated:
ಸುರಾನಿ

ತೀರ್ಥಹಳ್ಳಿ: ಹಿರಿಯ ರಂಗ ಕಲಾವಿದ ಮ್ಯಾಥ್ಯೂ ಸುರಾನಿ ಅವರನ್ನು ಪ್ರಸಕ್ತ ಸಾಲಿನ ಸಿಜೆಕೆ ರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಸಾಗರದ ಸ್ಪಂದನ ಹಾಗೂ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಸಹಯೋಗದಲ್ಲಿ ಜೂನ್ 30 ರಂದು ತುಂಗಾ ಕಾಲೇಜಿನ ರಜತ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಮ್ಯಾಥ್ಯೂ ಸುರಾನಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಗಣಪತಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ ವಹಿಸುವರು. ನಿವೃತ್ತ ಪ್ರಾಂಶುಪಾಲರಾದ ಡಾ.ಎಲ್.ಸಿ.ಸುಮಿತ್ರ ಪ್ರಶಸ್ತಿ ಪ್ರಧಾನ ಮಾಡುವರು. ರಂಗಕರ್ಮಿ ಸಂದೇಶ್ ಜವಳಿ ಅಭಿನಂದನಾ ನುಡಿಗಳನ್ನಾಡುವರು.

ಇದೇ ಸಂದರ್ಭದಲ್ಲಿ ಸಾಗರದ ರಂಗ ಕಲಾವಿದೆ ಎಂ.ವಿ.ಪ್ರತಿಭಾ ಅಭಿನಯಿಸುವ ಸ್ಪಂದನ ಪ್ರಸ್ತುತಪಡಿಸುವ ಊರ್ಮಿಳಾ ಏಕವ್ಯಕ್ತಿ ರಂಗ ಪ್ರಯೋಗದ ಪ್ರದರ್ಶನ ನಡೆಯಲಿದೆ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಬರೆದ ನಾಟಕವನ್ನು ಶ್ರೀಪಾದಭಟ್ ನಿರ್ದೇಶಿಸಿದ್ದಾರೆ.

ಸಿಜಿಕೆ ಬೀದಿ ರಂಗದಿನ ಮತ್ತು ಸಿಜಿಕೆ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಬೆಂಗಳೂರು, ಆರ್ಟ್ ಫೌಂಡೇಷನ್ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಆಯೋಜಿಸಲಾಗುತ್ತದೆ ಎಂದು ಜಿಲ್ಲಾ ಸಂಯೋಜಕಿ ಎಂ.ವಿ.ಪ್ರತಿಭಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !