ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 34.32 ಲಕ್ಷ ಉಳಿತಾಯ ಬಜೆಟ್‌

ಚಾಮರಾಜನಗರ ನಗರಸಭೆ 2014–15ನೇ ಸಾಲಿನ ಬಜೆಟ್‌ ಮಂಡನೆ
Last Updated 21 ಫೆಬ್ರುವರಿ 2014, 8:21 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ನಗರಸಭೆಯಲ್ಲಿ 2014–15ನೇ ಸಾಲಿನಡಿ ₨ 34.32 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಒಟ್ಟು ₨ 6,635.12 ಲಕ್ಷ ಮೊತ್ತದ ಬಜೆಟ್‌ ಮಂಡಿಸಿದರು.

ಬಜೆಟ್‌ನ ಪ್ರಾರಂಭಿಕ ಶಿಲ್ಕು ₨ 1,595.19 ಲಕ್ಷ. ಜಮಾ ₨ 5,039.93 ಲಕ್ಷ. ಒಟ್ಟಾರೆ ಬಜೆಟ್‌ ಮೊತ್ತ ₨ 66.35 ಕೋಟಿಯಾಗಿದೆ.
ಕಳೆದ ವರ್ಷದ ಬಜೆಟ್‌ ಮೊತ್ತ ₨ 49.38. ಕೋಟಿ ಇತ್ತು. ಈ ಬಾರಿ 16.97 ಕೋಟಿ ಹೆಚ್ಚಳವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಬಜೆಟ್‌ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಲಭಿಸುವ ಅನುದಾನವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಸ್ವಂತ ಮೂಲಗಳಿಂದ ಈ ಬಾರಿಯೂ ನಗರಸಭೆಯು ನಿರೀಕ್ಷಿತ ಆದಾಯ ಕ್ರೋಡೀಕರಿಸುವಲ್ಲಿ ಮಾರ್ಗೋಪಾಯ ಕಂಡುಕೊಂಡಿಲ್ಲ.

ಪ್ರತಿ ವರ್ಷದಂತೆ ಈ ಬಾರಿಯೂ ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಸೇರಿದಂತೆ ಇತರೇ ಮೂಲಗಳಿಂದ 341.15 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಪ್ರಸ್ತುತ ನಗರಸಭೆಯು ಆರ್ಥಿಕ ಸಂಕಷ್ಟದಲ್ಲಿದೆ. ಸುಮಾರು ₨ 1 ಕೋಟಿಗೂ ಹೆಚ್ಚು ಆಸ್ತಿ ಮತ್ತು ನೀರಿನ ತೆರಿಗೆ ವಸೂಲಿಯಾಗದಿರುವುದೇ ಇದಕ್ಕೆ ಮೂಲ ಕಾರಣ. ಬಾಕಿ ತೆರಿಗೆ ವಸೂಲಿ ಕುರಿತು ಮಾರ್ಗೋಪಾಯ ಕಂಡುಕೊಂಡಿರುವ ಬಗ್ಗೆ ಬಜೆಟ್‌ನಲ್ಲಿ ಅಧ್ಯಕ್ಷರು ಉತ್ತರಿಸಿಲ್ಲ!

ಸರ್ಕಾರದ ಅನುದಾನ:
ಎಸ್‌ಎಫ್‌ಸಿ–  ₨ 400 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ–    ₨ 446 ಲಕ್ಷ, ವಿದ್ಯುತ್‌ ಅನುದಾನ– ₨ 465 ಲಕ್ಷ, ನಗರೋತ್ಥಾನ(1ನೇ ಹಂತ)– ₨ 820 ಲಕ್ಷ, 13ನೇ ಹಣಕಾಸು– ₨ 258.42 ಲಕ್ಷ, ಯುಐಡಿಎಸ್‌ಎಸ್‌ಎಂಟಿ– ₨ 2,217 ಲಕ್ಷ, ವಾಜಪೇಯಿ ವಸತಿ– ₨ 20 ಲಕ್ಷ, ಎಸ್‌ಜೆಎಸ್‌ಆರ್‌ವೈ– ₨ 20 ಲಕ್ಷ ಸೇರಿದಂತೆ 52 ಲಕ್ಷ ಇತರೇ ಅನುದಾನ ನಿರೀಕ್ಷಿಸಲಾಗಿದೆ.

ಅಭಿವೃದ್ಧಿಗಾಗಿ ಖರ್ಚು:
ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿ– ₨ 3,410 ಲಕ್ಷ, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆ– ₨ 165 ಲಕ್ಷ, ನೀರು ಪೂರೈಕೆ ವಿದ್ಯುತ್‌ ಶುಲ್ಕ– ₨ 497.42 ಲಕ್ಷ, ಕುಡಿಯುವ ನೀರಿನ ಕಾಮಗಾರಿ– ₨ 432 ಲಕ್ಷ, ವಿವಿಧ ಯೋಜನೆಗಳಿಗೆ ವಂತಿಗೆ– ₨ 432 ಲಕ್ಷ ನಿಗದಿಪಡಿಸಲಾಗಿದೆ.

ಘನತ್ಯಾಜ್ಯ ವಿಲೇವಾರಿ– ₨ 252 ಲಕ್ಷ, ಕಟ್ಟಡ ಅಭಿವೃದ್ಧಿ ಮತ್ತು ನಿರ್ವಹಣೆ– ₨ 134 ಲಕ್ಷ, ಡಿಪಿಆರ್‌ ತಯಾರಿಕೆ–               ₨ 27 ಲಕ್ಷ, ಉದ್ಯಾನ ಅಭಿವೃದ್ಧಿ– ₨ 40 ಲಕ್ಷ, ಸ್ಮಶಾನ ಅಭಿವೃದ್ಧಿ– ₨ 10 ಲಕ್ಷ, ನೈಸರ್ಗಿಕ ವಿಕೋಪಕ್ಕೆ ಪರಿಹಾರ–  ₨ 10 ಲಕ್ಷ, ಶೇ 22.75ರ ಅನುದಾನದಡಿಯ ಕಾರ್ಯಕ್ರಮಗಳಿಗೆ ₨ 130 ಲಕ್ಷ ಮೀಸಲಿಡಲಾಗಿದೆ.

ಶೇ 7.25 ಅನುದಾನ– ₨ 45.90 ಲಕ್ಷ, ಅಂಗವಿಕಲರ ಕಲ್ಯಾಣ– ₨ 10 ಲಕ್ಷ, ನೌಕರರ ವೇತನ– ₨ 325 ಲಕ್ಷ, ಆಧುನಿಕ ಕಸಾಯಿ ಖಾನೆ ನಿರ್ಮಾಣ ₨ 481 ಲಕ್ಷ ಸೇರಿದಂತೆ ಇತರೇ ವೆಚ್ಚಕ್ಕೆ ₨ 242.38 ಲಕ್ಷ ಮೀಸಲಿಡಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ವಹಿದಾ ಬೇಗಂ, ಪೌರಾಯುಕ್ತ ವಿಜಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT