ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿಯಿಂದ ರಕ್ತದಾನ ಶಿಬಿರ: 25 ಯುನಿಟ್‌ ಸಂಗ್ರಹ

Last Updated 21 ನವೆಂಬರ್ 2020, 12:42 IST
ಅಕ್ಷರ ಗಾತ್ರ

ಚಾಮರಾಜನಗರ: ರೋಟರಿ ಸಿಲ್ಕ್‌ ಸಿಟಿ, ರೋಟರಿ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 25 ಯುನಿಟ್‌ ರಕ್ತ ಸಂಗ್ರಹವಾಗಿದೆ.

ನಗರದ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ನಡೆದ ಶಿಬಿರಲ್ಲಿ 29 ಮಂದಿ ನೋಂದಣಿ ಮಾಡಿಕೊಂಡಿದ್ದರು. ರಕ್ತದಾನ ಮಾಡಿದ ಎಲ್ಲರಿಗೂ ರಕ್ತ ನಿಧಿ ಕೇಂದ್ರದಿಂದ ಪ್ರಮಾಣಪತ್ರ ಸಲ್ಲಿಸಲಾಯಿತು.

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತವನ್ನು ನೀಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು. ಆ ತೃಪ್ತಿಯೂ ನಮಗೆ ಸಿಗುತ್ತದೆ’ ಎಂದರು.

‘ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪುಣ್ಯ ಪುರುಷರ ಜಯಂತಿ ಹಾಗು ಇತರ ವಿಶೇಷ ದಿನಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಬಡರೋಗಿಗಳಿಗೆ ಸ್ಪಂದಿಸಲು ಮುಂದಾಗಬೇಕು’ ಎಂದರು.

ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ಎ.ಎಸ್‌.ಪ್ರದೀಪ್ ಅವರು ಮಾತನಾಡಿ, ‘ಸಂಸ್ಥೆಯು ನಿರಂತರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಕೋವಿಡ್‌ ಕಾರಣದಿಂದಾಗಿ ಏಳು ತಿಂಗಳುಗಳಿಂದ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ. ಕೋವಿಡ್‌ ಸಂದರ್ಭದಲ್ಲೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್, ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ’ ಎಂದರು.

‘ವರ್ಷದ 365 ದಿನಗಳಲ್ಲೂ ಪ್ರತಿ ದಿನ ಒಬ್ಬರಿಂದ ರಕ್ತದಾನ ಮಾಡಿಸಿ, 365 ಯುನಿಟ್ ರಕ್ತ ಸಂಗ್ರಹಿಸುವ ಗುರಿಯೊಂದಿಗೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ’ ಎಂದರು.

ರೋಟರಿ ಸಿಲ್ಕ್‌ಸಿಟಿ ಕಾರ್ಯಧರ್ಶಿ ಮುರುಗೇಂದ್ರ ಸ್ವಾಮಿ, ರೋಟರಿ ರಕ್ತದಾನ ಶಿಬಿರದ ವಲಯ ಸಂಯೋಜಕ ದೊಡ್ಡರಾಯಪೇಟೆ ಗಿರೀಶ್, ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ.ದಿವ್ಯ, ರೋಟರಿ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಚಂದ್ರಪ್ರಭ ಜೈನ್, ಸಹಾಯಕ ಗವರ್ವನರ್‌ ಆರ್. ಸುಭಾಷ್, ರೊಟೇರಿಯನ್‌ಗಳಾದ ಡಿ.ಪಿ. ವಿಶ್ವಾಸ್, ಚೈತನ್ಯ ಹೆಗಡೆ, ಪಿ. ರಾಜು, ಎಚ್.ಎಂ.ಅಜಯ್, ಕಮಲ್‌ರಾಜ್, ನಾಗರಾಜು, ಡಾ. ಮಹದೇವಯ್ಯ, ರಕ್ತನಿಧಿ ಕೇಂದ್ರದ ಮುಕುಂದ, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT