ಪುರಸಭೆ: ರೂ. 36.65ಲಕ್ಷ ಉಳಿತಾಯ ಬಜೆಟ್ ಮಂಡನೆ
ಕೊಳ್ಳೇಗಾಲ: ಸರ್ಕಾರದ ಅನುದಾ ನವೇ ಆದಾಯ, ಹಳೆಯ ಕಾಮಗಾ ರಿಗಳ ಪುನರ್ ಘೋಷಣೆ, 36.65 ಲಕ್ಷ ನಿರೀಕ್ಷಿತ ಉಳಿತಾಯದ ಜಪ ದೊಂದಿಗೆ ಅಧ್ಯಕ್ಷೆ ಎಸ್. ಮಂಗಳಗೌರಿ ನಗರಸಭೆಯ 3485.32 ಲಕ್ಷಗಳ ಮೊತ್ತದ ಬಜೆಟ್ನ್ನು ಕೆಲವೇ ನಿಮಿಷಗಳಲ್ಲಿ ಮಂಡಿಸಿದರು.
ಪಟ್ಟಣದ ನಗರಸಭೆ ಸಭಾಂಗಣ ದಲ್ಲಿ ಸೋಮವಾರ 2012-13ನೇ ಸಾಲಿನ ಬಜೆಟ್ ಮಂಡಿಸಲಾಯಿತು. ಪ್ರಸಕ್ತ ವರ್ಷ ಆರಂಭಿಕ ಶಿಲ್ಕು 4,73,22,465 ರೂ ಸೇರಿದಂತೆ 3012.10 ಲಕ್ಷಗಳ ಆದಾಯ ನಿರೀಕ್ಷಿ ಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ 2343.25ರೂ ಅನುದಾನವೂ ಸೇರಿದೆ. ಉಳಿದ ಆದಾಯವನ್ನುದ್ದಿಮೆ ಪರವಾನಗಿ ಶುಲ್ಕ, ಆಸ್ತಿ ತೆರಿಗೆ, ಬಾಡಿಗೆ ಸೇರಿದಂತೆ ಇತರೆ ಮೂಲ ಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಉ್ದ್ದದೇಶಿಸಿರುವ ಹೆಚ್ಚಿನ ಪಾಲು ಹಣವನ್ನು ಸರ್ಕಾರದ ವಿವಿಧ ಯೋಜನೆಯ ಅನು ದಾನದಿಂದಲೇ ಸರಿದೂಗಿಸಿಕೊಳ್ಳಲು ನಗರಸಭೆ ಮುಂದಾಗಿದೆ.
ಆದಾಯದ ಮೂಲ : ನಗರಸಭೆಯ ವಿವಿಧ ಮೂಲ ಹಾಗೂ ಸರ್ಕಾರದ ಅನುದಾನದ ಆದಾಯ ನಿರೀಕ್ಷೆ ವಿವರ ಇಂತಿದೆ. ಕಟ್ಟಡ ಆಸ್ತಿ ತೆರಿಗೆ 53ಲಕ್ಷ ರೂ. ಉದ್ದಿಮೆ ಪರವಾನಗಿ ಶುಲ್ಕ 6 ಲಕ್ಷ ರೂ. ಬಾಡಿಗೆಯಿಂದ 18 ಲಕ್ಷ ರೂ.ಗಳು, ಕಟ್ಟಡ ಪರವಾನಗಿ ಮತ್ತು ನಿವೇಶನ ಅಭಿವೃದ್ಧಿ ಶುಲ್ಕ 8.50 ಲಕ್ಷ ರೂ. ಕರಸಂಗ್ರಹಣಾ ಶುಲ್ಕ 1ಲಕ್ಷ ರೂ. ಬ್ಯಾಂಕ್ ಠೇವಣಿಗಳ ಬಡ್ಡಿ 18 ಲಕ್ಷ ರೂ. ಮಾರುಕಟ್ಟೆ ಬಾಡಿಗೆ ಶುಲ್ಕ 3.25 ಲಕ್ಷ ರೂ. ಖಾತೆ ಬದಲಾವಣೆ ಶುಲ್ಕ 00.75ಲಕ್ಷ ರೂ. ಟೆಂಡರ್ ಫಾರಂಗಳ ಮಾರಾಟದಿಂದ 1.50 ಲಕ್ಷ, ಬಸ್ನಿಲ್ದಾಣ ಶುಲ್ಕ 5ಲಕ್ಷ ರೂ. ನೀರಿನ ಕರ ವಸೂಲಿ 25 ಲಕ್ಷ ರೂ, ನೌಕರರ ವೇತನ-203.25 ಲಕ್ಷ ರೂ. ಎಸ್ಎಫ್ಸಿ ಅಭಿವೃದ್ಧಿ ಅನುದಾನ 500.00 ಲಕ್ಷ ರೂ, ಸರ್ಕಾರದ ವಿಶೇಷ ಅಭಿವೃದ್ಧಿ ಅನುದಾನ 1500.00 ಲಕ್ಷಗಳು, 13ನೇ ಹಣಕಾಸು ಅನುದಾನದಿಂದ 95.00 ಲಕ್ಷಗಳು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ ಅನುದಾನಗಳು 45.00 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಅಭಿವೃದ್ಧಿ ವೆಚ್ಚ: ನಗರದಲ್ಲಿನ ರಸ್ತೆ ನಿರ್ಮಾಣ-775.00ಲಕ್ಷ ರೂ. ಚರಮಡಿ ನಿರ್ಮಾಣ-431.50, ಕಛೇರಿ ಕಟ್ಟಡ ಮತ್ತು ಹೊಸ ಕಟ್ಟಡ ನಿರ್ಮಾಣ 255.00 ಲಕ್ಷ ರೂ. ಶೌಚಾಲಯ ನಿರ್ಮಾಣ-50.00 ಲಕ್ಷ ರೂ. ಬೀದಿದೀಪ ಮತ್ತು ನೀರು ಸರಬರಾಜು ವಿದ್ಯುತ್ ಬಿಲ್ ಪಾವತಿ-150 ಲಕ್ಷ ರೂ. ಕಚೇರಿಗೆ ಗಣಕಯಂತ್ರ ಖರೀದಿ 5 ಲಕ್ಷ ರೂ, ಬೀದಿ ದೀಪಗಳ ನಿರ್ವಹಣೆಗಾಗಿ 35.00ಲಕ್ಷ ರೂ. ಪಂಪ್ಹೌಸ್ ಯಂತ್ರ ಹಾಗೂ ಇತರೆ ಸಲಕರಣೆ ಖರೀದಿಗೆ 25.00ಲಕ್ಷರೂ, ನೈರ್ಮಲ್ಯ ಕಾಮಗಾರಿ ನಿರ್ವಹಣೆಗೆ 45.00 ಲಕ್ಷ ರೂ. ನೀರು ಸರಬರಾಜು ಕಾಮಗಾರಿಗಳ ನಿರ್ವಹಣೆ ಮತ್ತು ದುರಸ್ಥಿಗಾಗಿ 45.00 ಲಕ್ಷ ರೂ. ಒಳ ಚರಂಡಿಗಾಗಿ 12.50 ಲಕ್ಷ ರೂ. ನೈರ್ಮಲ್ಯ ಕಾಮಗಾರಿ ವಿಭಾಗಕ್ಕೆ ಯಂತ್ರೋಪಕರಣ ಖರೀದಿ 165 ಲಕ್ಷ ರೂ. ನೀರು ಸರಬರಾಜು ವ್ಯವಸ್ಥೆಗೆ ಹೊಸ ಪೈಪ್ಲೈನ್ ಅಳವಡಿಕೆ-64.50 ಲಕ್ಷ ರೂ. ಶೇ.22.75ರ ಶೀರ್ಷಿಕೆಯಡಿ ನಗರಸಭಾ ನಿಧಿಯಿಂದ 9ಲಕ್ಷ ರೂ. ಸ್ವರ್ಣಜಯಂತಿ ರೋಜ್ಗಾರ್ ಯೋಜನೆ ಕಾರ್ಯಗಳಿಗೆ 45 ಲಕ್ಷ ರೂ. ಕೆಯುಐಡಿಎಫ್ಸಿ ಗೆ 100.00 ಲಕ್ಷ ರೂ, ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಮತ್ತು ಭತ್ಯೆಗಳ ಪಾವತಿಗೆ 198.00 ಲಕ್ಷ ರೂ ವೆಚ್ಚಮಾಡಲು ಬಜೆಟ್ನಲ್ಲಿ ಘೋಷಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.