ಗ್ರಾಮದ ಕರಿಕಲ್ಲು ಕ್ವಾರಿ ಬಳಿ 3 ದಿನಗಳ ಹಿಂದೆ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರಿಂದ ಬೋನ್ ಇಡಲಾಗಿತ್ತು. ಭಾನುವಾರ ರಾತ್ರಿ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಮತ್ತೊಂದು ಚಿರತೆ ತಪ್ಪಿಸಿಕೊಂಡಿದೆ. ಕರಿಕಲ್ಲು ಕ್ವಾರೆ ಹುಲ್ಲೇಪುರ ಹಾಗೂ ಕೆಂಪನಪುರ ಗ್ರಾಮಗಳ ಹತ್ತಿರವಿರುವುದರಿಂದ ಜನರು ಆತಂಕದಲ್ಲಿ ತಿರುಗಾಡಬೇಕಾಗಿದೆ. ಮತ್ತೊಂದು ಚಿರತೆ ಹಿಡಿಯಲು ಅರಣ್ಯ ಇಲಾಖೆಯವರು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.