ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಹೊರ ವಲಯದ ಕಬ್ಬಿನಗದ್ದೆ ಮತ್ತು ಕೆರೆಗಳ ಸುತ್ತತ ಸಂಚರಿಸುವ ಚಿರತೆ ನಾಲ್ಕು ದಿನ ಕಳೆದರೂ ಬೋನಿಗೆ ಬಿದ್ದಿಲ್ಲ. ಮಂಗಳವಾರ ಕಾಣಿಸಿಕೊಂಡಿಲ್ಲ.
ಅರಣ್ಯ ಸಿಬ್ಬಂದಿ ಕೃತಕ ಕೊಟ್ಟಿಗೆ ನಿರ್ಮಿಸಿ ಆಡು ಹಾಗೂ ಕೋಳಿಗಳನ್ನು ಬಿಟ್ಟು ಕಾಯುತ್ತಿದ್ದಾರೆ. ಗ್ರಾಮಸ್ಥರು ಸದ್ದು, ಗದ್ದಲ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಹಲವು ಹಳ್ಳಿಗಳ ಸುತ್ತ ಬೋನುಗಳನ್ನು ಇಟ್ಟು ಗಸ್ತು ಹೆಚ್ಚಿಸಲಾಗಿದೆ. ಕಟ್ನವಾಡಿ, ಕೆಸ್ತೂರು, ಮದ್ದೂರು ಸುತ್ತಲ ಗ್ರಾಮಗಳಲ್ಲಿ ಅರಣ್ಯ ಪಾಲಕರು ಬೀಡುಬಿಟ್ಟು, ಜಾನುವಾರು ಸಾಕಣೆದಾರರಿಗೆ ಮಾಹಿತಿ ನೀಡಿದರು.
‘ಹೊಸ ಮಾದರಿಯ ತುಮಕೂರು ಪಂಜರ ಇಟ್ಟು, ಮತ್ತೊಂದು ಪಂಜರವನ್ನು ಮೀಸಲಾಗಿ ಇಡಲಾಗಿದೆ. 60ಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯದಲ್ಲಿ ಇದ್ದಾರೆ ಊರುಗಳ ಸುತ್ತಮುತ್ತ ತೆರಳಿ ಗ್ರಾಮಸ್ಥರು ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಚಿರತೆ ಚಲನ ವಲನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನದಟ್ಟಣೆ ಸೇರದಂತೆ ಎಚ್ಚರ ವಹಿಸಲಾಗಿದೆ. ಜನರ ಗದ್ದಲಕ್ಕೆ ಒಗ್ಗಿಸುವ ಚಿರತೆ ಹೊರ ಬರುವ ತನಕ ಎಚ್ಚರ ವಹಿಸಬೇಕು ಎಂದು ಆರ್‌ಎಫ್‌ಒ ಲೋಕೇಶ್ ಮೂರ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.